
ಸಂಜೆವಾಣಿ ವಾರ್ತೆ
ಸಂಡೂರು: ಆ: 7:, ತಾಲೂಕಿನ ತೋರಣಗಲ್ಲು ಗ್ರಾಮದ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಡಿಯೋ ಪ್ರದರ್ಶನ ಮೂಲಕ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮಕ್ಕೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯಾ ಮತ್ತು ಶಾಲೆಯ ಪ್ರಾಂಶುಪಾಲರಾದ ವೀರೇಶ್ ಅವರು ಚಾಲನೆ ನೀಡಿದರು,
ಈ ಸಂದರ್ಭದಲ್ಲಿ ಡಾ.ಸಾದಿಯ ಅವರು ಮಾತನಾಡಿ ಎಲ್ಲಾ ವಿಡಿಯೋ ನೋಡಿ ಅರ್ಥ ಮಾಡಿಕೊಂಡು ಆರೋಗ್ಯದ ಕಡೆ ಗಮನ ಹರಿಸುವಂತೆ ತಿಳಿಸಿದರು, ನಂತರ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹದಿಂದ ಆಗುವು ದುಷ್ಪರಿಣಾಮಗಳು, ಹದಿಹರೆಯದವರ ಆರೋಗ್ಯ, ಋತುಚಕ್ರದ ಕ್ರಮ, ನೈರ್ಮಲ್ಯ, ಸಾಂಕ್ರಾಮಿಕ ಟಿ.ಬಿ, ಕುಷ್ಠ,ಮಲೇರಿಯಾ, ಡೆಂಗೀ ರೋಗಗಳ ನಿಯಂತ್ರಣ ಬಗ್ಗೆ ವೀಡಿಯೋ ಪ್ರದರ್ಶನ ಮಾಡಿಸಲಾಯಿತು, ನಂತರ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲಾಯಿತು, ಸರಿ ಉತ್ತರ ಹೇಳಿದವರಿಗೆ ಗ್ರಾಮ ಪಂಚಾಯತಿ ವತಿಯಿಂದ ಪೆನ್ನುಗಳನ್ನು ಬಹುಮಾನವಾಗಿ ನೀಡಲಾಯಿತು,ವಿಡಿಯೋ ಪ್ರದರ್ಶನದ ಕಾರ್ಯಕ್ರಮವನ್ನು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ನಡೆಸಿಕೊಟ್ಟರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಶಂಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್,ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಪ್ರಾಧ್ಯಾಪಕರಾದ ಲೋಕರೆಡ್ಡಿ, ರೆಹನಾ ಬೇಗಂ, ಭಾಗ್ಯಮ್ಮ,ಗೌಶಿಯಾ,ರೂಪಾ,ಶಿಲ್ಪಾ,ಅಕ್ಬರ್ ಅಲಿ,ಶುಶ್ರೂಷಕಿ ಭಾಗ್ಯ,ಪುಷ್ಪ ಇತರರು ಉಪಸ್ಥಿತರಿದ್ದರು