ಮೊರಾದಾಬಾದ್‌ನಲ್ಲಿ ಮಾನ್ಯತೆ ಪಡೆಯದ ಮದರಸಾಗಳು

ಲಕ್ನೋ,ನ.೧೬-ಉತ್ತರ ಪ್ರದೇಶದಲ್ಲಿ ೮,೫೦೦ ಕ್ಕೂ ಹೆಚ್ಚು ಮಾನ್ಯತೆ ಪಡೆಯದ ಮದರಸಾಗಳಿದ್ದು ಅದರಲ್ಲಿ ಮೊರಾದಾಬಾದ್‌ನಲ್ಲಿ ಹೆಚ್ಚಿವೆ ಎಂದು ಸರ್ಕಾರದ ಸಮೀಕ್ಷೆ ತಿಳಿಸಿದೆ.
ರಾಜ್ಯ ಮದ್ರಸಾ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆಯದೆ ೮,೫೦೦ಕ್ಕೂ ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ಎರಡು ತಿಂಗಳ ಕಾಲ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗ ಪಡಿಸಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಾಗಳಲ್ಲಿನ ಅಕ್ರಮಗಳನ್ನು ಪರಿಶೀಲಿಸಲು ೨೦೧೭ ರಲ್ಲಿ ಉತ್ತರ ಪ್ರದೇಶ ಸರ್ಕಾರ ಮದ್ರಸಾ ಶಿಕ್ಷಣ ಮಂಡಳಿ ಸ್ಥಾಪಿಸಿತ್ತು. ಆಗಸ್ಟ್ ೩೦ ರಂದು ರಾಜ್ಯದ ಬಿಜೆಪಿ ಸರ್ಕಾರ ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು ಸೆ.೧೦ರಂದು ಸಮೀಕ್ಷೆ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಎಲ್ಲಾ ೭೫ ಜಿಲ್ಲೆಗಳಲ್ಲಿ ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ ಪೂರ್ಣಗೊಂಡಿದೆ. ವಿವಿಧ ಜಿಲ್ಲೆಗಳ ಆಡಳಿತ ವರದಿಯ ಪ್ರತಿಗಳನ್ನು ನಮಗೆ ಕಳುಹಿಸಿದೆ ಮತ್ತು ಸರ್ಕಾರಕ್ಕೂ ಕಳುಹಿಸಿದೆ.
ಮೊರಾದಾಬಾದ್ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಮಾನ್ಯತೆ ಪಡೆಯದ ಮದರಸಾಗಳು ೫೫೦, ಸಿದ್ಧಾರ್ಥ್ ನಗರ, ೫೨೫ ಮತ್ತು ಬಹ್ರೈಚ್ ೫೦೦) ಕಂಡುಬಂದಿವೆ ಎಂದು ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ ಇಫ್ತಿಕರ್ ಅಹ್ಮದ್ ಜಾವೇದ್ ಹೇಳಿದ್ದಾರೆ.
ಆರಂಭದಲ್ಲಿ, ಸಮೀಕ್ಷೆ ನಿಲ್ಲಿಸಲು ಹಲವಾರು ಸುಳ್ಳು ಕಥೆ ತೇಲಿ ಬಿಡಲಾಯಿತು,ಆದರೆ ನಾವು ಅದನ್ನು ಸಮರ್ಥಿಸಿಕೊಂಡಿದ್ದೇವೆ ಮತ್ತು ಸಮೀಕ್ಷೆಯ ಹಿಂದೆ ಯಾವುದೇ ಹಿಡನ್ ಅಜೆಂಡಾಗಳಿಲ್ಲ ಎಂದು ಜನರಿಗೆ ತಿಳಿಸಿದ್ದೇವೆ. ವರದಿ ಆಧರಿಸಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.