
ನವದೆಹಲಿ/ ಮೊರೊಕ್ಕೋ, ಸೆ.೯- ವಿಶ್ವ ಪಾರಂಪರಿಕ ತಾಣವಾಗಿರುವ ಮೊರಕ್ಕೋದಲ್ಲಿ ತಡರಾತ್ರಿ ಸಂಭವಿಸಿದಪ್ರಬಲ ಭೂಕಂಪನಕ್ಕೆ ತತ್ತರಿಸಿದ್ದು, ಕನಿಷ್ಠ ೬೩೨ ಮಂದಿ ಮೃತಪಟ್ಟಿದ್ದಾರೆ.
ರಿಕ್ಟರ್ ಮಾಪನದಲ್ಲಿ ೬.೮ ತೀವ್ರತೆಯ ಭೂಕಂಪನದಿಂದ ಮೊರೊಕ್ಕೋದ ಹಳೆಯ ನಗರವನ್ನು ಸುತ್ತುವರೆದಿರುವ ಕೆಂಪು ಗೋಡೆಗಳು ಮತ್ತು ಯೊನೆಸ್ಲೋ ವಿಶ್ವ ಪರಂಪರೆಯ ತಾಣದಲ್ಲಿ ಸಂಭವಿಸಿದ ಭೂಕಂಪನದಿಂದ ಕಟ್ಟಡದ ಅವಶೇಷದಡಿ ಸಿಲುಕಿರುವ ಜನರ ರಕ್ಷಣೆ ಭರದಿಂದ ಸಾಗಿದೆ.
ಪ್ರಬಲ ಭೂಕಂಪನದಿಂದ ಸುಮಾರು ೩೦೦ ಜನರು ಸಾವನ್ನಪ್ಪಿರುವುದು ದೇಶದ ಆಂತರಿಕ ಸಚಿವಾಲಯ ದೃಢಪಡಿಸಿದೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ. ಭೂಕಂಪದ ಕೇಂದ್ರ ಭಾಗ ಮರ್ರೆಕೇಶ್‌ನ ಪಶ್ಚಿಮಕ್ಕೆ ೭೨ ಕಿಲೋಮೀಟರ್ ದೂರದಲ್ಲಿದೆ, ಇದು ಪ್ರಮುಖ ಆರ್ಥಿಕ ಕೇಂದ್ರವಾಗಿದೆ. ಹಳೆಯ ನಗರ ಸುತ್ತುವರೆದಿರುವ ಮತ್ತು ಯುನೆಸ್ಲೋ ವಿಶ್ವ ಪರಂಪರೆಯ ತಾಣವಾಗಿದೆ ಎಂದು ತಿಳಿಸಿದ್ದಾರೆ.
ಅಮೇರಿಕಾದ ಭೂಗರ್ಭ ಶಾಸ್ತ್ರ ಇಲಾಖೆಯ ಪ್ರಕಾರ ಭೂಕಂಪನ ಆರಂಭದಲ್ಲಿ ೬.೮ ರ ತೀವ್ರತೆ ಹೊಂದಿದ್ದು ರಾತ್ರಿ ೧೧:೧೧ ಕ್ಕೆ ಪ್ರಭಲ ಭೂಕಂಪನ ದಿಂದ ಹಲವಾರು ಸೆಕೆಂಡುಗಳ ಕಾಲ ಭೂಮಿ ನಡುಗಿತು. ಇದರಿಂದ ಕಟ್ಟೆಗಳು ಕುಸಿದು ಬಾರಿ ಸಾವು ನೋವಿಗೆ ಕಾರಣವಾಗಿದೆ ಎಂದು ಮೊರಾಕೊದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್ ತಿಳಿಸಿದೆ.
ಮೊದಲ ಭೂಕಂಪದ ೧೯ ನಿಮಿಷಗಳ ನಂತರ ೪.೯ ರಿಕ್ಟರ್ ಮಾಪಕದಲ್ಲಿ ನಂತರದ ಎರಡನೇ ಭೂಕಂಪನ ಆಘಾತದಿಂದ ಅಪಾರ ಸಾವು ನೋವಿಗೆ ಕಾರಣವಾಗಿದೆ.
೬.೮ ತೀವ್ರತೆಯ ಕಂಪನದ ಬಳಿಕ ಕಿರುಚಾಟದಿಂದ ಜನರು ಮನೆಯಿಂದ ಹೊರಬಂದಿದ್ದಾರೆ. ಈ ವೇಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ನೂರಾರು ಮಂದಿ ಗಾಯಗೊಂಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.
ಪ್ರಧಾನಿ ಸಂತಾಪ
ಮೊರಾಕೊದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಆದ ಜೀವಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಗಾಯಾಳುಗಳೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಭಾರತದಿಂದ ಸಾಧ್ಯವಿರುವ ಎಲ್ಲವನ್ನೂ ನೀಡಲು ಸಿದ್ಧವಾಗಿದೆ.ಸಂಕಷ್ಟದ ಸಮಯದಲ್ಲಿ ಮೊರಾಕೊಗೆ ನೆರವು ನೀಡುವುದು ಕರ್ತವ್ಯ ಎಂದಿದ್ದಾರೆ.