
ಅಮಿಝ್‌ಮಿಝ್ (ಮೊರಾಕ್ಕೊ), ಸೆ.೧೧- ಭೂಕಂಪನ ವಲಯದಲ್ಲಿರುವ ಮೊರಾಕ್ಕೊದಲ್ಲಿ ಈಗಾಗಲೇ ಹಲವು ಬಾರಿ ಭೀಕರ ಅವಘಡಗಳು ನಡೆದಿದ್ದು, ಸದ್ಯ ಅನಾಹುತದಿಂದ ಮೃತರ ಸಂಖ್ಯೆ ೨೨೦೦ ದಾಟಿದೆ ಎನ್ನಲಾಗಿದೆ. ಇನ್ನೂ ಹೆಚ್ಚಿನ ನಾಗರಿಕರು ಅವಶೇಷಗಳಡಿಯಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಕೂಡ ವೇಗದಿಂದ ಸಾಗಿದೆ.
ತುರ್ತು ಪರಿಸ್ಥಿತಿ ತಂಡಗಳು ದೊಡ್ಡ ದೊಡ್ಡ ಉಪಕರಣಗಳನ್ನು ಗ್ರಾಮಕ್ಕೆ ತರಲು ಹೆಣಗಾಡುತ್ತಿರುವ ಹಿನ್ನೆಲೆಯಲ್ಲಿ ಸ್ವತಹ ನಾಗರಿಕರೇ ತಮ್ಮ ಕೈಗಳಿಂದ ಮಣ್ಣನ್ನು ಪಕ್ಕಕ್ಕೆ ಸರಿಸಿ, ರಕ್ಷಣಾ ಕಾರ್ಯ ನಡೆಸಿ, ಬದುಕುಳಿದವರ ರಕ್ಷಣೆಗೆ ಹರಸಾಹಸ ಪಡುತ್ತಿರುವ ದೃಶ್ಯ ಮನ ಕಲುಕುವಂತಿದೆ. ಅದೂ ಅಲ್ಲದೆ ಹಲವು ಗ್ರಾಮಗಳು ಇದೀ ನಿರ್ಜನವಾಗಿದ್ದು, ಹೆಚ್ಚಿನವರು ಮೃತಪಟ್ಟಿದ್ದರೆ ಉಳಿದವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅದೃಷ್ಟವಶಾತ್ ಆಗಿ ಬದುಕುಳಿದಿರುವ ಕೆಲವರು ಅನ್ನ-ನೀರಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಹಾಗಾಗಿ ಅಕ್ಷರಶಃ ಹಲವು ಗ್ರಾಮಗಳಲ್ಲಿ ನೀರವ ಮೌನ ಆವರಿಸಿದೆ. ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಈ ಪೈಕಿ ಆಸ್ಪತ್ರೆಗಳು ಕೂಡ ಸೇರಿದೆ. ಹಾಗಾಗಿ ಆಸ್ಪತ್ರೆಗಳ ಒಳಗೆ ಹೋಗುವ ಕೂಡ ಭಯಪಡಬೇಕಾದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮೈದಾನಗಳಲ್ಲೇ ಬೆಡ್‌ಗಳನ್ನು ಹಾಕಿ, ಗಾಯಾಳುಗಳನ್ನು ಉಪಚರಿಸಲಾಗುತ್ತಿದೆ. ಇನ್ನು ಶುಕ್ರವಾರದಂದು ಮಾರಾಕೇಶ್‌ನ ದಕ್ಷಿಣದಲ್ಲಿರುವ ಪರ್ವತ ಹಳ್ಳಿಗಳ ದೂರದ ಸಮೂಹದ ಸಂಭವಿಸಿದ ಭೂಕಂಪದಲ್ಲಿ ಈಗಾಗಲೇ ಮೃತರ ಸಂಖ್ಯೆ ೨೩೦೦ರತ್ತ ದಾಟಿಗೆ ಎನ್ನಲಾಗಿದೆ. ಇದು ಕಳೆದ ೬೦ ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪ ಎಂದೇ ಹೇಳಲಾಗಿದೆ. ಸುಮಾರು ೬.೮ ತೀವ್ರ ಹೊಂದಿರುವ ಭೂಕಂಪದಲ್ಲಿ ಈಗಾಗಲೇ ಹಲವಾರು ಪ್ರಮುಖ ಕಟ್ಟಡಗಳು ಧ್ವಂಸಗೊಂಡಿದೆ.