ಮೊರಬ ಗ್ರಾ ಪಂ ವ್ಯಾಪ್ತಿ ನರೇಗಾ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ.


ಸಂಜೆವಾಣಿ ವಾರ್ತೆ                              
ಕೂಡ್ಲಿಗಿ. ಮೇ.7 :- ಮತದಾನ ಸಂವಿಧಾನಿಕ ಹಕ್ಕು ಅದನ್ನು ಕಡ್ಡಾಯವಾಗಿ ಚಲಾಯಿಸಿ ಎನ್ನುವ ಜಾಗೃತಿಯನ್ನು ಚುನಾವಣಾ ಸ್ವೀಪ್ ಸಮಿತಿ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮ ನಡೆಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು ಇಂದು ತಾಲೂಕಿನ ಮೊರಬ ಗ್ರಾಮಪಂಚಾಯಿತಿ ವ್ಯಾಪ್ತಿಯ ನರೇಗಾ ಕೂಲಿಕಾರ್ಮಿಕರು ತಾವು ಮಾಡುತ್ತಿರುವ ಕೆರೆಯಂಗಳದ ಕೆಲಸ ಮಾಡುವ ಸ್ಥಳದಲ್ಲೇ ಮತದಾನ ಜಾಗೃತಿ ಕಾರ್ಯಕ್ರಮ ಇಂದು ಬೆಳಿಗ್ಗೆ ಆಚರಿಸಲಾಯಿತು.
ಮೊರಬ  ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕೆರೆ ಹೂಳು ತೆಗೆಯುವ ಕಾಮಗಾರಿ ಸ್ಥಳದಲ್ಲಿ ಹಾಜರಿದ 432  ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿಕಾರ್ಮಿಕರಿಗೆ ವಿಜಯನಗರ ಜಿ ಪಂ ಮುಖ್ಯ ಯೋಜನಾಧಿಕಾರಿ ಜೆ.ಎಂ ಅನ್ನದಾನ ಸ್ವಾಮಿಯವರ  ಅಧ್ಯಕ್ಷತೆಯಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ಆಯೋಜಿಸಿ  ಕೂಲಿ ಕಾರ್ಮಿಕರಿಗೆ ಇಂದು ಬೆಳಿಗ್ಗೆ  ಮತದಾನ ಜಾಗೃತಿ ಮೂಡಿಸಲಾಯಿತು.
ವಿಜಯನಗರ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅನ್ನದಾನ ಸ್ವಾಮಿ ಮಾತನಾಡಿ ಮತದಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ನೀಡಿರುವ ಸಂವಿಧಾನಿಕ ಹಕ್ಕಾಗಿದ್ದು ಅದನ್ನು ನಾವೆಲ್ಲರೂ ಹಬ್ಬದಂತೆ ಆಚರಿಸಬೇಕು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ನೆರೆಹೊರೆಯವರನ್ನು ಮತದಾನ ಮಾಡುವಂತೆ ಪ್ರೇರೇಪಿಸಿ ನಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು  ಹೆಚ್ಚು ಹೆಚ್ಚು ಜನರಿಗೆ ಜಾಗೃತಿ ಮೂಡಿಸಿ ಮತದಾನ ಪ್ರಮಾಣ ಹೆಚ್ಚುವಂತೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವದ ಹಿತ ಕಾಪಾಡಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ನಾವೆಲ್ಲರೂ  ಜವಾಬ್ದಾರಿಯಿಂದ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು  ತಿಳಿಸಿದರು
ಕೂಡ್ಲಿಗಿ  ತಾಲೂಕ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ವೈ  ರವಿಕುಮಾರ  ಮಾತನಾಡಿ ಕಳೆದ ಚುನಾವಣೆಗಳಲ್ಲಿ ತಾಲೂಕಿನ ಮತದಾನ ಪ್ರಮಾಣ ಶೇಕಡ 72ಕ್ಕಿಂತ ಕಡಿಮೆಯಾಗಿತ್ತು ಇದರಿಂದಾಗಿ ಮತದಾನ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಮನವಿ ಮಾಡುವ ಮೂಲಕ ಮತದಾನ ಜಾಗೃತಿಯನ್ನು ಸ್ವೀಪ್ ಸಮಿತಿ ಮೂಲಕ ನಡೆಸಲಾಗುತ್ತಿದ್ದು ನಮ್ಮ ಮತ ನಮ್ಮ ಹಕ್ಕು ಎಂದು ತಪ್ಪದೆ ಮತದಾನ ಮಾಡಿ ಕ್ಷೇತ್ರದ ಪ್ರಗತಿಯತ್ತ ಕೊಂಡೊಯ್ಯುವುದು ನಿಮ್ಮದಾಗಲಿ ನೀವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ನಿಮ್ಮ ನೆರೆಹೊರೆಯವರು, ಸಂಬಂಧಿಕರು, ಮತ್ತು ಹಿತೈಷಿಗಳಲ್ಲಿ  ಜಾಗೃತಿ ಮೂಡಿಸುವ ಮೂಲಕ ಈ ವರ್ಷದ ಮತದಾನ ಪ್ರಮಾಣವನ್ನು ಶೇಕಡ 95ಕ್ಕಿಂತ ಹೆಚ್ಚಾಗುವಂತೆ ಮುಂದಾಗಬೇಕು ಎಂದರು.   
 ಈ  ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯಿತಿ ವ್ಯವಸ್ಥಾಪಕರಾದ ಲೋಕೇಶ್ ಬಾಬು, ಮೊರಬ ಗ್ರಾಮ   ಪಂಚಾಯಿತಿ ಅಭವೃದ್ಧಿ  ಭಾಗ್ಯ, ಕಾರ್ಯದರ್ಶಿ ಹಾಲಸ್ವಾಮಿ,  ತಾಲೂಕ ಐ.ಇ.ಸಿ ಸಂಯೋಜಕರಾದ ಬಿ ವಿನಯಕುಮಾರ   ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಬಿಎಫ್ ಟಿ, ಜಿಕೆಎಂ, ನರೇಗಾ ಯೋಜನೆಯ ಮೇಟಿಗಳು ಮತ್ತು ಕೂಲಿಕಾರ್ಮಿಕರು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.