ಮೊರಬ ಗ್ರಂಥಾಲಯ ಆವರಣ ಸ್ವಚ್ಛ -ಓದಲು ಮತ್ತೊಂದು ಪೇಪರ್.

ಕೂಡ್ಲಿಗಿ.ನ.21:- ಬಡವರ, ಗ್ರಾಮೀಣ ಬಾಗದ ಜನರಿಗೆ ಜ್ಞಾನದೇಗುಲವಾಗಬೇಕಾದ ಗ್ರಂಥಾಲಯ ಸ್ವಚ್ಛತೆ ಮರೆತು ಹಾಗೂ ದಿನಪತ್ರಿಕೆ ತರಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಕುರಿತು ಚುರುಕು ಮುಟ್ಟುವ ಸುದ್ದಿ ಸಂಜೆವಾಣಿಲಿ ನವೆಂಬರ್ 14ರಂದು ಪ್ರಕಟಗೊಂಡಿತ್ತು ಅದನ್ನರಿತ ಮೊರಬ ಗ್ರಾಮಪಂಚಾಯಿತಿ ಪಿಡಿಓ ಗ್ರಂಥಪಾಲಕರಿಗೆ ತರಾಟೆಗೆ ತೆಗೆದುಕೊಂಡು ಗ್ರಂಥಾಲಯ ಆವರಣ ಮತ್ತು ಒಂದು ದಿನಪತ್ರಿಕೆ ಜೊತೆ ಮತ್ತೊಂದು ಪತ್ರಿಕೆ ತರಿಸುವಂತಾಗಿ ಓದುಗರ ಮನಸಲ್ಲಿ ಸಂತಸದ ನಗೆ ಬೀರಿಸಿದೆ.
ಮೊರಬ ಗ್ರಂಥಾಲಯ ಕುರಿತಂತೆ ನವೆಂಬರ್ 14 ರಂದು ಸಂಜೆವಾಣಿಲಿ ಓದಲು ಒಂದೇ ದಿನಪತ್ರಿಕೆ ಕಿಟಕಿ ಇಲ್ಲ, ಮುರಿದ ಬಾಗಿಲು ಗಿಡಗಂಟೆಗಳ ನಡುವೆ ಮೊರಬ ಗ್ರಂಥಾಲಯ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು ಈ ಸುದ್ದಿಯಿಂದ ಎಚ್ಚೆತ್ತ ಮೊರಬ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಂಥಪಾಲಕರನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡು ಗ್ರಂಥಾಲಯ ಆವರಣದಲ್ಲಿ ಬೆಳೆದ ಗಿಡಗಂಟೆ ಸ್ವಚ್ಛಗೊಳಿಸಿ ಒಂದು ದಿನಪತ್ರಿಕೆ ಜೊತೆ ಮತ್ತೊಂದು ಪತ್ರಿಕೆ ತರಿಸುವಲ್ಲಿ ಗ್ರಂಥಪಾಲಕರು ಮುಂದಾಗಿದ್ದರೆಂದು ಇದರಿಂದ ನಮಗೆಲ್ಲಾ ಸಂತಸ ತಂದಿದ್ದು ಸಂಜೆವಾಣಿ ಪತ್ರಿಕೆಗೆ ಓದುಗರ ಪರವಾಗಿ ಕರಿಯಪ್ಪ ಅಭಿನಂದನೆ ತಿಳಿಸಿ ಶ್ಲಾಘಿಸಿದರು.