ಮೊಮ್ಮಗ ಸಾವು: ಅಜ್ಜಿಗೆ ಹೃದಯಾಘಾತ

ಸುಂಟಿಕೊಪ್ಪ:ಏ:09: ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಂಟಿಕೊಪ್ಪ ಸಮೀಪದ ಹೊಸತೋಟ ಹಾರಂಗಿ ಹಿನ್ನೀರಿನಲ್ಲಿ ಗುರುವಾರ ನಡೆದಿದೆ. ಸಮೀಪದ ಎರಡನೇ ಐಗೂರು ನಿವಾಸಿ ರಮ್ಲಾನ್ ಎಂಬುವವರ ಪುತ್ರ ಮುಬಾಶೀರ್(18) ಮೃತಪಟ್ಟ ಯುವಕ.ಹಾಗೂ ರುಕಿಯಾ(62) ಹೃದಯಾಘಾತದಿಂದ ಮೃತಪಟ್ಟವರು.
ಘಟನೆಯ ವಿವರ: ಹೊಸತೋಟ, ಐಗೂರಿವಿನ 11 ಮಂದಿ ಯುವಕರು ಗುರುವಾರ ಬೆಳಿಗ್ಗೆ ಫುಟ್‍ಬಾಲ್ ಆಟವಾಡಲೆಂದು ಮೈದಾನಕ್ಕೆ ತೆರಳಿದ್ದು, ನಂತರ ಸ್ನಾನ ಮಾಡಲೆಂದು ಮುಬಾಶೀರ್ ಈ ಹೊಳೆಗೆ ಇಳಿದಿದ್ದಾನೆ ಎನ್ನಲಾಗಿದೆ.ಆದರೆ ಇದೆ ಸಂದರ್ಭ ಆತ ನೀರಿನಲ್ಲಿ ಮುಳುಗಿದ್ದಾನೆ.ಈ ಘಟನೆಯನ್ನು ಕಣ್ಣಾರೆ ಕಂಡ ಆತನ ಸ್ನೇಹಿತರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ರಾತ್ರಿ, 10 ಗಂಟೆಯಾದರೂ ಯುವಕ ಮನೆಗೆ ಬಂದಿಲ್ಲ ಎಂದು ಮನೆಯವರು ಹುಡುಕಾಡಿ ಆತ ನೀರಿನಲ್ಲಿ ಮುಳುಗಿರುವ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಆ ಯುವಕ ಅಜ್ಜಿ ರುಕಿಯಾ ಅವರಿಗೆ ಹೃದಯಾಘಾತವಾಗಿ ನಿಧನ ಹೊಂದಿದರು. ರಾತ್ರಿ ಸುಂಟಿಕೊಪ್ಪ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಹೊಳೆಯಲ್ಲಿ ಯುವಕನ ಮೃತದೇಹದ ಕಾರ್ಯಾಚರಣೆಗೆ ಕತ್ತಲೆ ಅಡ್ಡಿಯಾದರಿಂದ ಶುಕ್ರವಾರ ಬೆಳಿಗ್ಗೆಯಿಂದಲೇ ನುರಿತ ಈಜುಗಾರರು ಹುಡುಗಾಟದಲ್ಲಿ ತೊಡಗಿದರು.
ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಅನತಿ ದೂರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.ಇದರಿಂದ ಆಘಾತಗೊಂಡ ಆತನ ತಾಯಿಯು ಅಸ್ಚಸ್ಥಗೊಂಡಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ಪಿಎಸ್ ಐ ಪುನಿತ್, ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದರು.