
ಇಂಡಿ:ಜು.11:ಅಂಗನವಾಡಿ ಸೇವೆಗಳ ಸಮರ್ಥ ವಿತರಣೆಗಾಗಿ ಪ್ರಾರಂಭವಾದ ಮೊಬೈಲ್ ಆಧಾರಿತ ಪೋಷಣೆ ಟ್ರ್ಯಾಕರಗೆ ಮೊಬೈಲ್ ಟ್ರಬಲ್ ಎದುರಾಗಿದ್ದು ಮೊಬೈಲ್ ವಾಪಸ್ ಪಡೆಯಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಅಂಗನವಾಡಿ ಕೇಂದ್ರ ಬಡಿಗೇರ ಓಣಿಯಿಂದ ಕುಂಬಾರ ಓಣಿ,ಅಂಬೇಡ್ಕರ,ಬಸವೇಶ್ವರ ವೃತ್ತದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲುಪಿತು.
ಅಂಗನವಾಡಿ ನೌಕರರ ಸಂಘದ ತಾಲೂಕಾ ಅಧ್ಯಕ್ಷೆ ಭಾರತಿ ವಾಲಿ ಮಾತನಾಡಿ ಇಲಾಖೆ 4 ವರ್ಷಗಳ ಹಿಂದೆ ಪೋಷಣೆ ಟ್ರ್ಯಾಕರ್ ಸಲುವಾಗಿ ವಿತರಿಸಿದ್ದ ಮೊಬೈಲಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸ್ಟೋರೆಜ್ ಬಹಳ ಕಡಿಮೆ ಇದೆ. ಹೀಗಾಗಿ ವಾಪಸಾತಿ ಅಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿ ತಿಂಗಳು 1,15 ಮತ್ತು 23 ತಾರೀಖಿನಂದು ಮೊಟ್ಟೆ ವಿತರಣೆ ಮಾಡುತ್ತಾರೆ. ಸರಿಯಾಗಿ ಮಾಡುವದಿಲ್ಲ. ಹೀಗಾಗಿ ಟೆಂಡರ್ ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗಿರಿಜಾ ಸಕ್ರಿ,ದಾನಮ್ಮ ಗುಗ್ಗರಿ,ಪದ್ಮಾವತಿ ಬಿರಾದಾರ,ದಾನಮ್ಮ ಮಸೂತಿ,ಶಂಕರೆಮ್ಮ ಪುಠಾಣಿ,ಭಾಗಿರಥಿ ತಳವಾರ,ಲಲಿತಾ ಕೋಟಿ,ರೇಖಾ ಕಬಾಡೆ,ರೇಣುಕಾ ವಾಲಿಕಾರ ಮತ್ತಿತರಿದ್ದರು.