ಮೊಬೈಲ್ ವಶಕ್ಕೆ ಪಡೆದಿಲ್ಲ: ರಶ್ಮಿತಾ ಚೆಂಗಪ್ಪ

ಬೆಂಗಳೂರು,ಸೆ.೨೨- ನಶೆನಂಟಿನ ಸಂಬಂಧ ಅಂತರಿಕ ಭದ್ರತಾ ಪಡೆಯ ಅಧಿಕಾರಿಗಳು ವಿಚಾರಣೆ ವೇಳೆ ನನ್ನ ಮೊಬೈಲ್ ವಶಪಡಿಸಿಕೊಂಡಿಲ್ಲ ಪ್ರಕರಣದ ಬಗ್ಗೆ ಕೆಲ ಮಾಹಿತಿ ಪಡೆದಿದ್ದಾರೆ ಎಂದು ನಟಿ ರಶ್ಮಿ ಚೆಂಗಪ್ಪ ತಿಳಿಸಿದ್ದಾರೆ.
ವಿಚಾರಣೆಗೆ ಕರೆದು ತಕ್ಷಣ ನಾವು ಆರೋಪಿಗಳಂತಲ್ಲ. ನಾನು ಈಗಾಗಲೇ ಒಂದು ವಿಚಾರಣೆಗೆ ಹಾಜರಾಗಿದ್ದೇನೆ. ಡ್ರಗ್ ಮಾಫಿಯಾದ ಬಗ್ಗೆ ನಿಮಗೆ ಏನಾದ್ರೂ ಮಾಹಿತಿ ಇದೆಯಾ ನೋಡಿದೀರಾ ಎಂದು ತಿಳಿದುಕೊಳ್ಳಲು ನಮ್ಮನ್ನ ಕೇಳಲು ಪೊಲೀಸರು ಕರೆದಿದ್ದರು ಎಂದು ತಿಳಿಸಿದರು.
ಕಿರುತೆರೆಯ ಕಲಾವಿದರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಾನು ಟಾಪ್ ಒನ್ ಸೀರಿಯಲ್ ನಲ್ಲಿ ನಟಿಸಿದ್ದೇನೆ. ಮುಂದೆ ಬೇರೆಯವರನ್ನ ಕರೆಯಬಹುದು ಅಥವಾ ಕರೆಯದಿರಬಹುದು. ನಮ್ಮ ಬಳಿ ಕೇಳಿದ ಮಾಹಿತಿಯನ್ನ ನೀಡಿ ಬಂದಿದ್ದೇನೆ. ಪೊಲೀಸರು ವಿಚಾರಣೆಗೆ ಕರೆದ ಮರುದಿನವೇ ಹೋಗಿ ಸ್ಪಷ್ಟನೆ ನೀಡಿ ಬಂದಿದ್ದೇನೆ. ನಮಗೆ ಆ ರೀತಿಯ ವ್ಯಕ್ತಿಗಳ ಜೊತೆ ಯಾವುದೇ ಸಂಪರ್ಕ ಸಹ ಇಲ್ಲ. ನಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಚಾರಣೆಗೆ ಹಾಜರಾಗಬೇಕೆಂದಾಗ ಒಂದು ಕ್ಷಣ ಅಚ್ಚರಿ ಆಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ವಿಚಾರಣೆಗೆ ಕರೆಯಲಾಗುತ್ತಿದೆ ಎಂದು ಹೇಳಿದರು. ಯಾವುದೇ ತಪ್ಪು ಮಾಡದೇ ಇರುವುದರಿಂದ ಆರಾಮಾಗಿ ಹೋಗಿ ವಿಚಾರಣೆ ಎದುರಿಸಿ ಬಂದಿದ್ದೇನೆ. ಮತ್ತೆ ವಿಚಾರಣೆ ಕರೆಯಲಾಗುವುದು ಎಂದು ಹೇಳಿಲ್ಲ. ಒಂದು ವೇಳೆ ಕರೆದರೆ ಹೋಗುತ್ತೇನೆ ಎಂದು ತಿಳಿಸಿದರು.
ನಾನು ಯಾವುದೇ ಪಾರ್ಟಿ, ಪಬ್ ಗಳಿಗೆ ಹೋಗಿಲ್ಲ. ಕೆಲಸ ಮಾಡುತ್ತಿದ್ದ ವಾಹಿನಿಯ ಕಾರ್ಯ ಕ್ರಮಗಳಿಗೆ ಹೋಗಿದ್ದೇನೆ.ಅಲ್ಲಿ ಗಳಲ್ಲಿ ಡ್ರಗ್ಸ್ ಸಂಬಂಧಿಸಿದಂತಹ ಯಾವುದೇ ಕೆಲಸಗಳು ನನ್ನ ಗಮನಕ್ಕೆ ಬಂದಿಲ್ಲ. ನಾವು ಈಗ ಅಂಬೆಗಾಲಿಟ್ಟು ಸಿನಿಮಾ, ಕಿರುತೆರೆಯಲ್ಲಿ ಕೆಲಸ ಮಾಡಬೇಕೆಂದು ಬಂದಿದ್ದೇವೆ. ಕೆಲಸ ಮಾಡಿದ ದಿನ ಮಾತ್ರ ನಮಗೆ ಒಂದು ದಿನದ ಸಂಬಳ ಸಿಗಲಿದೆ ನಮ್ಮ ಮೇಲೆ ಕುಟುಂಬಸ್ಥರು ಅವಲಂಬಿತರಾಗಿದ್ದು, ಜೊತೆಗೆ ನನ್ನನ್ನು ನಾನು ನೋಡಿಕೊಳ್ಳಬೇಕು. ಬ್ರಹ್ಮಗಂಟು ಗೀತಾ ಭಾರತಿ ಅವರನ್ನು ವಾಹಿನಿಯ ಇವೆಂಟ್ ಗಳಲ್ಲಿ ಭೇಟಿಯಾಗಿದ್ದೇನೆ. ಅಭಿಷೇಕ್ ದಾಸ್ ಜೊತೆ ಒಂದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದ್ದೇನೆ.
ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ಮೊಬೈಲ್ ಮತ್ತು ನನ್ನ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಆಗಲ್ಲ ಎಂದು ತಿಳಿಸಿದರು.