ಮೊಬೈಲ್ ಬಿಡಿ- ಪುಸ್ತಕ ಹಿಡಿ ಮಸ್ತಕ ಹೆಚ್ಚುತ್ತದೆ- ವಿ.ಹೆಚ್.ನಾಯಕ

ಸಿರವಾರ.ಸೇ೧೯- ಅಂತರ್ಜಾಲದಲ್ಲಿ ಎಲ್ಲಾ ವಿಷಯದ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದು ಶಾಲೆ ಕಾಲೇಜುಗಳಲ್ಲಿ ಮಾಡುವ ಪಾಠಗಳನ್ನು ಸಹ ಮೊಬೈಲ್ ನಲ್ಲಿ ಅಭ್ಯಾಸ ಮಾಡುವುದು ಬಹಳ ಅಪಾಯಕಾರಿಯಾಗಿದೆ, ಪುಸ್ತಕ ಹಿಡಿದು ಓದಿದರೆ ಮಸ್ತಕಕ್ಕೆ ಹೋಗುತ್ತದೆ. ಮೊಬೈಲ್ ಅಭ್ಯಾಸ ಮಾಡಿವರಿಗೂ, ಪುಸ್ತಕದಲ್ಲಿ ಅಭ್ಯಾಸ ಮಾಡಿದವರಿಗೂ ಬಹಳಷ್ಟು ವ್ಯತ್ಯಾಸಗಳು ಇವೆ ಅದನ್ನು ತಿಳಿದು ಅಭ್ಯಾಸ ಮಾಡಿ ಗುರಿ ಮುಟ್ಟಬೆಕು ಎಂದು ತಹಸೀಲ್ದಾರ ವಿಜಯೇಂದ್ರಹುಲಿನಾಯಕ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪಟ್ಟಣದ ಬಸವೇಶ್ವರ ಪದವಿ ಪೂರ್ವ ಪದವಿ ಮಹಾವಿದ್ಯಾಲಯದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಾರ್ಷಿಕ ಚಟುವಟಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊವೀಡ್ ಪೂರ್ವದಲ್ಲಿ ೯೦% ವಿದ್ಯಾರ್ಥಿಗಳು ಶಾಲೆ, ಕಾಲೇಜು ವಿಷಯಗಳನ್ನು ಪುಸ್ತಕದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆದರೆ ಈಗ ಅನೇಕ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಪಠ್ಯಗಳನ್ನು ಅಭ್ಯಾಸ ಮಾಡುತ್ತಿರುವುದು ತಪ್ಪು. ಪುಸ್ತಕದಲ್ಲಿ ಅಭ್ಯಾಸ ಮಾಡುವುದರಿಂದ ವಿಷಯ ಗ್ರಹಿಕೆ ಹೆಚ್ಚಾಗುತ್ತದೆ. ಮೊಬೈಲ್ ನಿಂದ ಏಕಾಗ್ರತೆ ಕಡಿಮೆಯಾಗುತ್ತದೆ. ಮೊಬೈಲ್ ಸಂದೆಶಗಳು, ಕರೆಗಳು ಬಂದಾಗ ಮನಸ್ಸು ಆ ವಿಷಯದ ಕಡೆ ಹೋಗಿ ಪಾಠ ಮನನ ಆಗುವುದಿಲ. ವಿದ್ಯಾರ್ಥಿಗಳು ಜೀವನ ಗುರಿ, ಗುರು ಇದಾಗ ಸಾಧನೆ ಮಾಡಬಹುದು. ಶಿಸ್ತು ಕಠಿಣ ಪರಿಶ್ರಮ ಪಟ್ಟರೆ ಹೆತ್ತವರ ಕಾಣುತ್ತಿರುವ ಕನಸ್ಸು ನನಸ್ಸು ಮಾಡಲು ಸಾದ್ಯ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ, ದುಶ್ಚಟಗಳಿಗೆ ದಾಸರಾಗಬೇಡಿ. ೩೭೧ಜೆ ಕಲಂ ನಮ್ಮ ಭಾಗದವರಿಗೆ ವರದಾನವಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ರಾಯಚೂರು ಪ್ರಥಮ ದರ್ಜೇ ಕಾಲೇಜಿನ ಸಹಾಕ ಪ್ರಾದ್ಯಾಪಕರಾದ ಜೆ.ಎಲ್ ಈರಣ್ಣ ವಿಶೇಷ ಉಪನ್ಯಾಸಕ ನೀಡಿದರು. ಈ ಸ,ದರ್ಭದಲ್ಲಿ ಕಾಲೇಜಿನ ಅದ್ಯಕ್ಷ ನರಸಿಂಹರಾವ ಕುಲಕರ್ಣಿ, ಉಪಾದ್ಯಕ್ಷ ಶಿವರಾರೆಡ್ಡಿ, ನಿರ್ಧೇಶಕರಾದ ವಿಜಯಕುಮಾರ ಗುಡದಮನೆ, ಚನ್ನಪ್ಪ ಬಡಿಗೇರ, ಪ್ರಾಚಾರ್ಯರಾದ ಡಾ.ಧರ್ಮಣ್ಣ,ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಇದ್ದರ,