ಮೊಬೈಲ್ ಬಿಟ್ಟು ದೇಹ ದಂಡಿಸಿ:ದೇವರಮನಿ

ಆಲಮೇಲ:ಡಿ.27:ಇಂದಿನ ಯುವಕರು ಮೊಬೈಲ್ ಕಂಪ್ಯೂಟರ್,ಅಂತರ್ಜಾಲದಲ್ಲಿ ಆಟವಾಡುತ್ತಾರೆ ಆದರೆ ದೇಹಕ್ಕೆ ದಂಡಿಸುವ ವ್ಯಾಯಾಮ ಆಗುವ ಯಾವುದೇ ಕ್ರೀಡೆಯನ್ನು ಆಡುವುದಿಲ್ಲ ಆದರಿಂದ ಇಂದಿನ ಯುವಕರು ಹಳೇ ಕಾಲದ ಯುವಕ ಹಾಗೇ ಸದೃಢವಾಗಿಲ್ಲ ಕ್ರೀಡಯ ಮಹತ್ವ ತಿಳಿಯಬೇಕು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕಾನಿಪ ಅಧ್ಯಕ್ಷ ಸೈಯದ್ ಎನ್.ದೇವರಮನಿ ಹೇಳಿದರು.

ಪಟ್ಟಣದ ಉರ್ದು ಶಾಲೆಯ ಆವರಣದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತವಾಗಿ ನಡೆದ ವಾಲ್ಹಿಬಾಲ್ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿರು.

  ಕ್ರೀಡೆಗಳು ಯುವಕರಲ್ಲಿ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ವಿಕಸನಗೊಳಿಸಲು ಸಹಕಾರಿಯಾಗಿದೆ ನೀವು ಆಟವನ್ನು ಗೆಲ್ಲುತ್ತಿರ ಅಥವಾ ಸೋಲುತ್ತೀರಾ ಎನ್ನುವುದು ಮುಖ್ಯವಲ್ಲ ನೀವು ಆಟವನ್ನು ಹೇಗೆ ಆಡಿದಿರಿ ಎಂಬುಂದು ಮುಖ್ಯ ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಪ.ಪಂ. ಸದಸ್ಯ ಸಾಧೀಕ ಸುಂಬಡ ಮಾತನಾಡಿ ಯಾವದೇ ಸಾಧನೆಯ ಸಿದ್ಧಿ ಆರೋಗ್ಯ ಪೂರ್ಣ ಶರೀರದಿಂದ ಮಾತ್ರ ಸಾಧ್ಯ ನಿಜವಾದ ದೇವರ ಪೂಜೆಯೇ ಶರೀರವನ್ನು ಸ್ವಾಸ್ಥ್ಯ ಪೂರ್ಣವಾಗಿ ಇಟ್ಟು ಕೊಳ್ಳುವುದಾಗಿದೆ ನಮ್ಮ ದೇಹವು ಆರೋಗ್ಯ ಪೂರ್ಣ ಸ್ವಾಸ್ಥ್ಯ ಪೂರ್ಣವಾಗಿರಲು ಕ್ರೀಡೆಗಳು ಮುಖ್ಯವಾದ ಪಾತ್ರವಹಿಸುತ್ತವೆ. ಕ್ರೀಡೆಗಳು ಪರಸ್ಪರರನ್ನು ಹೊಂದಾಣಿಕೆ ಗುಣ ಬೆಳೆಸಿಕೊಳ್ಳಬೇಕು ಕ್ರೀಡೆಗಳು ಮೈ ಮನಸ್ಸುಗಳಿಗೆ ಉಲ್ಲಾಸ ಕೊಡುತ್ತವೆ,ಶಾರೀರಿಕ ಬೆಳವಣಗೆಗೆ ಇವು ಪೂರಕವಾಗಿದೆ ಎಂದರು.

ಈ ಸಂದರ್ಭದಲ್ಲಿ ವಹಾಬ್ ಸುಂಬಡ, ಸೈಪನ ಜಮಾದಾರ, ಬಶೀರ ತಾಂಬೋಳಿ,ಗುಲಾಮ್ ಸಾಲೋಟಗಿ, ಇಲಿಯಾಸ ಭೂಸನೂರ, ಪತ್ರಕರ್ತ ಗನಿ ಎಂ.ದೇವರಮನಿ, ಬಂದೇನವಾಜ್ ಮೇಲಿನಮನಿ, ಮುನ್ನಾ ತಾಂಬೋಳಿ, ಅಶ್ಪಾಕ ಮುಲ್ಲಾ, ಅಕಬರ ಬೇಪಾರಿ, ಶಫೀಕ ಜಮಾದಾರ, ಬಂದೇನವಾಜ್ ಸೌದಾಗರ, ಯೂನೂಸ್ ದೇವರಮನಿ, ಟಿಪ್ಪು ಸುಂಬಡ, ರಾಜು ಸುಂಬಡ, ಬಾಷಾ ಸಾಲೋಟಗಿ, ರಾಜಶೇಖರ ಬಂಟನೂರ, ಸಾಧೀಕ ಗೌಂಡಿ, ಆಶೀಫ್ ಚೌಧರಿ, ಅಮೀನ ವಾಲೀಕಾರ ಇದ್ದರು.

ಕಪ್ ವಿತರಿಸಿದವರು ಕಾನಿಪ ಅಧ್ಯಕ್ಷ ಸೈಯದ್ ಎನ್. ದೇವರಮನಿ, ವಹಾಬ್ ಸುಂಬಡ. ಬಹುಮಾನ ವಿಜೇತ ತಂಡಗಳು ಪ್ರಥಮ ಲಚ್ಯಾಳ ಸಿಸಿ ತಂಡ, ದ್ವಿತೀಯ ಅಲ್‍ಪ್ಲಾಹ್ ಕ್ರಮವಾಗಿ ವಿಜೇತವಾಗಿವೆ, ಅದೇ ರೀತಿಯಾಗಿ ವೈಯಕ್ತಿಕವಾಗಿ ಉತ್ತಮ ಆಟವಾಡಿದ ಸ್ಪರ್ಧಾಳುಗಳಾದ ಬೆಸ್ಟ್ ಶಾಟರ್ ಕುಮಾರ ಗುಲಬರ್ಗಾ, ಬೆಸ್ಟ್ ಪಾಸ್ಸರ್ ಸೈಪನ ವಡಗೇರಿ, ಬೆಸ್ಟ್ ಡಿಫೆಂಡರ್ ಸಾಕೀಬ್ ಅಡಾಡಿ ಇವರಿಗೆ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.