ಮೊಬೈಲ್ ಬಳಕೆ ಮಕ್ಕಳಿಗೆ ಮಾರಕ

ಬಾಗಲಕೋಟೆ, ಮಾ.7: ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆ ಅತಿ ಅಧಿಕವಾಗಿದ್ದು ಮಕ್ಕಳು ಮೊಬೈಲ್ ಬಳಕೆಯಲ್ಲಿ ನಿರತರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಮೊಬೈಲ್ ಬಳಕೆಯು ಅಪಾಯಕಾರಿ ಯಾಗಿರುವುದರಿಂದ ಮೊಬೈಲ್ ಅನ್ನು ಮಕ್ಕಳ ಕೈಯಲ್ಲಿ ಕೊಡಬೇಡಿ ಎಂದು ಜಂಟಿ ನಿರ್ದೇಶಕ ಬಿ.ಹೆಚ್.ಗೋನಾಳ ಮಾತನಾಡಿದರು.
ತಾಲೂಕಿನ ಬೇವೂರು ಗ್ರಾಮದ ಪ್ರಗತಿ ನ್ಯಾಷನಲ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ಪ್ರಗತಿ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪ ಹಿರೇಮಠ ಜ್ಯೋತಿ ಬೆಳಗಿಸುವ ಮೂಲಕ ಮಾತನಾಡಿ, ಮಕ್ಕಳಲ್ಲಿ ಉತ್ತಮವಾದ ಸಂದೇಶಗಳನ್ನು ಭಾರತದ ಸಂಸ್ಕೃತಿಯನ್ನು ಕಲಿಸಲು ಸಂದೇಶ ನೀಡಿದರು. ಮಕ್ಕಳಲ್ಲಿ ಉತ್ತಮವಾದ ಆರೋಗ್ಯವನ್ನು ಕಲ್ಪಿಸುವಲ್ಲಿ ಹಾಗೂ ಉತ್ತಮವಾದ ಶಿಕ್ಷಣವನ್ನು ಕೊಡಿಸುವಲ್ಲಿ ಪಾಲಕರ ಕಾರ್ಯ ಮಹತ್ವವಾಗಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಗುಡೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಕೆಂಚಪ್ಪಜ್ಜನವರು ವಹಿಸಿದ್ದರು. ಆಡಳಿತ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ, ಸಂಸ್ಥೆಯ ಅಧ್ಯಕ್ಷ ಬಸವರಾಜ ಅಮರಗೋಳ, ಶ್ರೀ ಹುಚ್ಚೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಟಿ ಹೆಚ್. ಸನಗಿನ, ಮಾತೋಶ್ರೀ ಪಾರ್ವತಿ ಅಮರಗೋಳ, ವೈ ಜಿ ಫೌಂಡೇಶನ್ ಅಧ್ಯಕ್ಷ ಶಿವರಾಜ ವಾಡಕರ, ರಾಮಚಂದ್ರ ಭಜಂತ್ರಿ, ಪಾಟೀಲ್ ಸರ್, ಮಲ್ಲಿಕಾರ್ಜುನ್ ಒಡೆಯರ್, ಗ್ರಾಮದ ಹಿರಿಯರು ಯುವಕರು ಶಾಲಾ ಪಾಲಕರು ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಹೊರಸು ಮಾದರ ನಿರೂಪಿಸಿದರು.