ಮೊಬೈಲ್ ದುರ್ಬಳಕೆಯಿಂದ ಸೈಬರ್ ಕ್ರೈಂ ಹೆಚ್ಚಳ: ತಿರುಮಲ್ಲೇಶ

ಆಳಂದ:ಜ.3: ಸೈಬರ್ ಕ್ರೈಂ ಅಪರಾಧ ಹತ್ತಿಕ್ಕಲು ಸಾರ್ವಜನಿಕರು ಜಾಗೃತಿ ಹೊಂದಬೇಕು ಎಂದು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‍ಐ ತಿರುಮಲ್ಲೇಶ ಕೆ. ಅವರು ಹೇಳಿದರು.

ಪಟ್ಟಣದ ಸಂಬುದ್ಧ ಪದವಿ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಪರಾಧ ಪ್ರಕರಗಳನ್ನು ಹತ್ತಿಕ್ಕಲು ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಸುಮಾರು 70 ಸಿಸಿ ಕ್ಯಾಮಿರಾ ಅಳವಡಿಸಲಾಗಿದೆ. ಅಲ್ಲದೆ, ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೊಬೈಲ್ ಕರೆ ಮಾಡಿ ಮೇಸೆಜ್ ಮತ್ತು ಓಟಿಪಿ ತಮಗೆ ಕಳುಹಿಸಿ ತಮ್ಮ ಖಾತೆಯಲ್ಲಿನ ಹಣವನ್ನು ದೋಚುವ ಜನರಿದ್ದಾರೆ. ಇಂಥ ಪ್ರಕರಣಗಳಿಗೆ ಬಲಿಯಾಗದೆ ಎಚ್ಚರವಹಿಸಬೇಕು. ಯುವಕರು ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರತೊಡಗಿದೆ. ಇದರಿಂದ ದೂರವಿದ್ದು, ಓದಿನ ಕಡೆಗಮನ ಕೊಡಬೇಕು. ಕಾನೂನು ಪಾಲಿಸಿ ಉತ್ತಮ ಪ್ರಜೆಗಳಾಗಿ ಕೀರ್ತಿ ತರಬೇಕು ಎಂದು ಹೇಳಿದರು.

ಸಮಾಜ ವಿರೋಧಿ ಕೃತ್ಯಗಳನ್ನು ಕಂಡಬಂದಿಲ್ಲಿ 112ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಸಕಾಲಕ್ಕೆ ಪೊಲೀಸರು ಸಹಾಯಕ್ಕೆ ಬರುವರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸಂಜಯ ಪಾಟೀಲ ಮಾತನಾಡಿದರು.

ಉಪನ್ಯಾಸಕ ಶರಣು ಪರಾಣೆ, ಧನರಾಜ ಪಾಟೀಲ, ಬಾಬುರಾವ್ ಚಿಕ್ಕಣಿ, ಜಗದೀಶ ಮೂಲಗೆ, ಸುಖಮುನಿ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.