ಮೊಬೈಲ್ ಟವರ್ ಯೂನಿಟ್ ಕಳವು;ಇಬ್ಬರು ಖದೀಮರ ಬಂಧನ

ಬೆಂಗಳೂರು,ಜ.೧೯-ಮೊಬೈಲ್ ಟವರ್ ಗಳಿಗೆ ಅಳವಡಿಸಿದ್ದ ರಿಮೋಟ್ ರೆಡಿಯೋ ಯೂನಿಟ್ ಗಳನ್ನು ಕಳವು ಮಾಡಿದ್ದ
ಇಬ್ಬರು ಖದೀಮರನ್ನು ಕೆಂಗೇರಿ ಪೊಲೀಸರು ಬಂಧಿಸಿ ೧೧ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಕೆಂಗೇರಿಯ ಚಳ್ಳೇಘಟ್ಟದ ದೀಪಕ್ ರಾವ್ ಪವಾರ್ (೨೨) ಹಾಗೂ ಕುಂಬಳಗೋಡಿನ ಜಾನ್ ಪಿಂಟು(೨೦)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಬಂಧಿತರಿಂದ ೧೧ ಲಕ್ಷ ಮೌಲ್ಯದ ೧೪ ರಿಮೋಟ್ ರೆಡಿಯೋ ಯೂನಿಟ್ ಬಾಕ್ಸ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಜ.೧೩ ರಂದು ಮಧ್ಯಾಹ್ನ ೧೨-೩೦ ಗಂಟೆಯಿಂದ ೧-೧೫ ಗಂಟೆಯ ಕೆಂಗೇರಿ ಉಪನಗರದ ೮೦ ಅಡಿ ರಸ್ತೆಯ ಕಾರ್ಡಿಯಾಲಜಿ ಆಸ್ಪತ್ರೆ ಕಟ್ಟಡದ ಪಕ್ಕದ ವೋಡಾಫೋನ್ ಕಚೇರಿಯ ಕಟ್ಟಡದ ೪ನೇ ಮಹಡಿಯ ಟೆರೇಸ್ ಮೇಲೆ ಅಳವಡಿಸಿದ್ದ ಮೊಬೈಲ್ ಟವರ್ ಗಳಲ್ಲಿ ಅಳವಡಿಸಿದ್ದ ರಿಮೋಟ್ ರೆಡಿಯೋ ಯೂನಿಟ್ ಬಾಕ್ಸ್ ಗಳನ್ನು ಕಳವು ಮಾಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕೆಂಗೇರಿ ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್ ಗೌಡ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.