ಮೊಬೈಲ್ ಟವರ್ ಗೆ ಬೆಂಕಿ: ಕೇಬಲ್ ಭಸ್ಮ

ದಾವಣಗೆರೆ.ಸೆ.೨೫; ಮೊಬೈಲ್ ಟವರ್ ಬೆಂಕಿ ಬಿದ್ದ ಘಟನೆ ನಗರದಲ್ಲಿ ನಡೆದಿದೆ.
ನಗರದ ಹಳೆಯ ಪ್ರವಾಸಿ ಮಂದಿರ ರಸ್ತೆಯ ಮಲ್ಲಿಕಾರ್ಜುನ್ ಲಾಡ್ಜ್ ಬಳಿ ಮೊಬೈಲ್ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮಲ್ಲಿಕಾರ್ಜುನ ಲಾಡ್ಜ್ ಹಾಗೂ ಸಾರಸ್ವತ ಬ್ಯಾಂಕ್
ಹಿಂಭಾಗದಲ್ಲಿ ಮೊಬೈಲ್ ಟವರ್ ಅಳವಡಿಸಲಾಗಿತ್ತು. ಈ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಹೊತ್ತಿ ಉರಿದಿದೆ. ಬ್ಯಾಟರಿ, ಜನರೇಟರ್, ಕೇಬಲ್ ಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿವೆ. ಇನ್ನು ಟವರ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಯಿತು. ಸುದ್ದಿ ತಿಳಿಯುತ್ತಿದ್ದಂತೆಯೇ ಸಕಾಲಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಕ್ಕಪಕ್ಕ ಕಟ್ಟಡಕ್ಕೆ ವ್ಯಾಪಿಸುವುದನ್ನು ತಡೆದ ಅಗ್ನಿ ಶಾಮಕ ಸಿಬ್ಬಂದಿ ಅನಾಹುತ ತಪ್ಪಿಸಿದರು. ಇನ್ನು ಅಗ್ನಿಶಾಮಕ ದಳ ಅಧಿಕಾರಿ ಬಸವಪ್ರಭು ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯಿತು.