ಮೊಬೈಲ್ ಟವರ್ ಎಗರಿಸಿದ ಕಳ್ಳರು

ಪ್ರಯಾಗರಾಜ್,ಡಿ.೧- ಚಿನ್ನಾಭರಣ, ವಸ್ತುಗಳು, ಕಬ್ಬಿಣದ ಸೇತುವೆ ಕಳವು ಮಾಡಿದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಉಜ್ಜೈನಿ ಗ್ರಾಮದಲ್ಲಿ ೧೦ ಟನ್ ತೂಕದ ೫೦ ಮೀಟರ್ ಎತ್ತರದ ಮೊಬೈಲ್ ಟವರ್ ಕಳ್ಳತನವಾದ ಘಟನೆ ಜರುಗಿದೆ.
ತಂತ್ರಜ್ಞರೊಬ್ಬರು ನವೆಂಬರ್ ೨೯ ರ ಬುಧವಾರವಷ್ಟೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.ಮಾರ್ಚ್ ೩೧ ರಂದು ಟವರ್ ಕಾಣೆಯಾಗಿದೆ ಎಂದು ಅವರ ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ ೩೭೯ (ಕಳ್ಳತನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಟವರ್ ಆದರೆ ಶೆಲ್ಟರ್, ಎಲೆಕ್ಟ್ರಿಕಲ್ ಫಿಟ್ಟಿಂಗ್‌ಗಳು ಮತ್ತು ಇತರ ಉಪಕರಣಗಳು – ಮೊಬೈಲ್ ಟವರ್ ಅಸೆಂಬ್ಲಿಯ ಎಲ್ಲಾ ಭಾಗಗಳು – ಸುಮಾರು ೮.೫ ಲಕ್ಷಕ್ಕೂ ಹೆಚ್ಚು ಮೌಲ್ಯಗಳನ್ನು ಹೊಂದಿದೆ ಎಂದು ತಂತ್ರಜ್ಞರು ದೂರಿನಲ್ಲಿ ತಿಳಿಸಿದ್ದಾರೆ.
ಸಂದೀಪನ್ ಘಾಟ್ ಠಾಣೆಯ ಪೊಲೀಸ್ ತಂಡವು ಸ್ಥಳ ಪರಿಶೀಲನೆ ನಡೆಸಿ ಜಮೀನು ಮಾಲೀಕರು ಮತ್ತು ಸ್ಥಳೀಯ ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ . ಈ ವರ್ಷ ಜನವರಿಯಲ್ಲಿ ಕೌಶಂಬಿ ಜಿಲ್ಲೆಯ ಉಜ್ಜೈನಿ ಗ್ರಾಮದ ಉಬಿದ್ ಉಲ್ಲಾ ಎಂಬುವವರ ಜಮೀನಿನಲ್ಲಿ ತಮ್ಮ ಕಂಪನಿಯ ಟವರ್ ಅಳವಡಿಸಲಾಗಿತ್ತು ಎಂದು ತಂತ್ರಜ್ಞ ರಾಜೇಶ್ ಕುಮಾರ್ ಯಾದವ್ ದೂರಿನಲ್ಲಿ ತಿಳಿಸಿದ್ದಾರೆ.
ಮಾರ್ಚ್ ೩೧, ೨೦೨೩ ರಂದು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ, ಸಂಪೂರ್ಣ ಗೋಪುರವು ಇತರ ವಸ್ತುಗಳ ಜೊತೆಗೆ ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗಿದೆ ಎಂದು ಯಾದವ್ ಹೇಳಿದ್ದಾರೆ.