
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.10 :- ಮೊಬೈಲ್ ಎಂಬುದು ಯುವಕರನ್ನು ತಲೆ ತಗ್ಗಿಸುವ ಕೆಲಸ ಮಾಡಿದರೆ, ಪುಸ್ತಕವೆಂಬುದು ಯುವಜನತೆಯ ವಿದ್ಯೆ- ಬುದ್ದಿವಂತಿಕೆ ಕಲಿಸುವ ಮೂಲಕ ಸಾಧನೆ ತೋರಿಸುವ ಹಾದಿಯಲ್ಲಿ ತಲೆ ಎತ್ತುವಂತೆ ಮಾಡುತ್ತದೆ ಇದರಿಂದಾಗಿ ಮೊಬೈಲ್ ಎಂಬ ಗೀಳಿನಿಂದ ಯುವಜನತೆ ಭವಿಷ್ಯ ಹಾಳು ಮಾಡಿಕೊಳ್ಳದಿರಿ ಎಂದು ಪ್ರಗತಿಪರ ರೈತ ಪ್ರಭು ಸೊಪ್ಪಿನ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅವರು ಪಟ್ಟಣದ ಶ್ರೀ ರಾಘವೇಂದ್ರ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ಅಂತಿಮ ವರ್ಷದ ಡಿಹೆಚ್ ಮತ್ತು ಡಿಎಂಎಲ್ ಟಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಪ್ರತಿಯೊಬ್ಬ ವ್ಯಕ್ತಿಗೂ ಮೊಬೈಲ್ ಬೇಕೇ ಬೇಕು ಎನ್ನುವಷ್ಟರ ಮಟ್ಟಿಗೆ ಬಂದಿದ್ದು ಮೊಬೈಲ್ ಗೀಳು ಬುದ್ದಿಮಾಂದ್ಯಾರನ್ನಾಗಿ ಸಹ ಮಾಡಬಲ್ಲದು, ಮೊಬೈಲ್ ಬಳಕೆ ಕೇವಲ ಅನುಕೂಲಕ್ಕಾಗಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿ ಯುವಸಮುದಾಯಕ್ಕೆ ಪ್ರಭು ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ದೇವಪ್ಪ ಮಾತನಾಡಿ ರಾಘವೇಂದ್ರ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿಕೊಂಡು ಹೋಗುತ್ತಿರುವ ವಿದ್ಯಾರ್ಥಿಗಳು ಯಾವುದಾದರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗ ಹರಿಸಿಕೊಂಡು ಮೌಲ್ಯಯುತ ಜೀವನ ನಡೆಸಿ ಬಡತನದ ಬೇಗೆಯನ್ನು ನಿವಾರಿಸುವಲ್ಲಿ ಕಾಲೇಜಿನ ಕೊಡುಗೆ ಅಪಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸತ್ಯಮೂರ್ತಿ, ಉಪನ್ಯಾಸಕ ಅಮೀರ್ ಭಾಷಾ, ಮಹೇಶ, ಶಿವಕುಮಾರ, ಕೆ ಕುಮಾರ, ಗಣೇಶ, ಕರಿಬಸಮ್ಮ ಹಾಗೂ ಇತರರು ಉಪಸ್ಥಿತರಿದ್ದರು.
ಕೀರ್ತನಾ ಸ್ವಾಗತಿಸಿ ನಿರೂಪಿಸಿದರೆ ರೇಖಾ ವಂದನಾರ್ಪಣೆ ಸಲ್ಲಿಸಿದರು.