ಕಲಬುರಗಿ,ಜೂ.12-ವ್ಯಕ್ತಿಯೊಬ್ಬರು ಗೆಳೆಯರೊಂದಿಗೆ ಮಾತನಾಡುತ್ತ ನಿಂತಿದ್ದ ವೇಳೆ ಇಬ್ಬರು ಅಪರಿಚಿತ ಯುವಕರು ಮೊಬೈಲ್ ಕಸಿದುಕೊಂಡು ಹೋಗಲು ಯತ್ನಿಸಿರುವ ಘಟನೆ ನಗರದ ಸೂಪರ್ ಮಾರ್ಕೆಟ್‍ನಲ್ಲಿ ನಡೆದಿದೆ.
ನಗರದ ಮಿಜಗುರಿಯ ಮಹ್ಮದ್ ಅಲಿಮೋದ್ದಿನ್ ಅವರು ಗೆಳೆಯರಾದ ಗೋರಕನಾಥ ಕಾಂಬಳೆ ಮತ್ತು ಬಿಲಾಲ್ ಜೊತೆಗೆ ಸೂಪರ್ ಮಾರ್ಕೆಟ್‍ನ ಸಂಗೀತಾ ಮೊಬೈಲ್ ಅಂಗಡಿ ಬಳಿ ಮಾತನಾಡುತ್ತ ನಿಂತಿದ್ದರು. ಈ ವೇಳೆ ಕಾಮತ್ ಹೋಟೆಲ್ ಕಡೆಯಿಂದ ಬಂದ 20 ರಿಂದ 25 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ಯುವಕರು ಅಲಿಮೊದ್ದೀನ್ ಬಳಿ ಇದ್ದ ಸ್ಯಾಮಸಂಗ್ ಎ52ಎಸ್ ಮೊಬೈಲ್ ಕಸಿದುಕೊಂಡು ಹೋಗಲು ಯತ್ನಿಸಿದ್ದಾರೆ ಎಂದು ಗೋರಕನಾಥ ಕಾಂಬಳೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.