ಮೊಬೈಲ್ ಕಳ್ಳರ ಸೆರೆ 4.50 ಲಕ್ಷ ರೂ ಮಾಲುವಶ

ಬೆಂಗಳೂರು, ಏ.೬-ವಿಳಾಸ ಕೇಳುವ ನೆಪದಲ್ಲಿ ಬಸ್ ಕಾಯುತ್ತಿದ್ದ ಯುವತಿಯೊಬ್ಬರ ಮೊಬೈಲ್ ಕಸಿದು ಪರಾರಿಯಾಗಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಂಧ್ರಹಳ್ಳಿ ಮುಖ್ಯರಸ್ತೆಯ ಚಕ್ರನಗರದ ಕಿರಣ.ಎಲ್ (೨೭)ಹಾಗೂ ನಿಖಿಲ್ (೨೧) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.


ಬಂಧಿತ ಆರೋಪಿಗಳಿಂದ ೪ ಲಕ್ಷ ೫೦ ಸಾವಿರ ಮೌಲ್ಯದ ೩ ದ್ವಿಚಕ್ರ ವಾಹನಗಳು ಹಾಗೂ ವಿವಿಧ ಕಂಪನಿಯ ೨೫ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳೆದ ಏ.೧ ರಂದು ಮಧ್ಯಾಹ್ನ ೧-೩೦ರ ವೇಳೆ ಅಂಜನಾ ನಗರ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತ ಯುವತಿಯೊಬ್ಬರು ನಿಂತಿದ್ದಾಗ ಅರೋಪಿಗಳು ಆಟೋದಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ವಿವೋ ಕಂಪನಿಯ ಮೊಬೈಲ್ ಕಸಿದು ಪ್ರತಿರೋಧ ತೋರಿದಾಗ ಕಾಲಿನಿಂದ ಒದ್ದು ಬೀಳಿಸಿ ಪರಾರಿಯಾಗಿದ್ದರು.
ಈ ಬಗ್ಗೆ ಬ್ಯಾಡರಹಳ್ಳಿ ಇನ್ಸ್‌ಪೆಕ್ಟರ್ ಎ.ರಾಜೀವ್ ಮತ್ತವರ
ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ,ಜ್ಞಾನಭಾರತಿ, ರಾಜ ಗೋಪಾಲ ನಗರ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಮೊಬೈಲ್ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು.
ಆರೋಪಿ ಗಳು ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಸಂಚರಿಸುತ್ತಾ ಜನಸಂದಣಿ ಕಡಿಮೆಯಿರುವ ಸ್ಥಳಗಳಲ್ಲಿ ಒಡಾಡುವವರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು ಎಂದು ತಿಳಿಸಿದರು.