ಮೊಬೈಲ್ ಕಳ್ಳರ ಬಂಧನ

ಕಲಬುರಗಿ,ಜೂ.27-ಇಬ್ಬರು ಮೊಬೈಲ್ ಕಳ್ಳರನ್ನು ರೋಜಾ ಪೊಲೀಸರು ಬಂಧಿಸಿ 26,700 ರೂ.ಮೌಲ್ಯದ ವಿವಿಧ ಕಂಪನಿಯ ಮೊಬೈಲ್‍ಗಳನ್ನು ಜಪ್ತಿ ಮಾಡಿದ್ದಾರೆ.
ಸೊಲ್ಲಾಪುರದ ಜೈದ್ ತಂದೆ ಜಾವೀದ್ ಶೇಖ್ (21) ಮತ್ತು ಹೈದ್ರಾಬಾದ್‍ನ ಮಹ್ಮದ್ ಫೈಜಾನ್ (19) ಎಂಬುವವರನ್ನು ಬಂಧಿಸಿ ವಿವಿಧ ಕಂಪನಿಯ 26,700 ರೂ.ಮೌಲ್ಯದ ಮೊಬೈಲ್ ಜಪ್ತಿ ಮಾಡಿದ್ದಾರೆ.
ರೋಜಾ ಪಿ.ಐ.ಎ.ವಾಜೀದ್ ಪಟೇಲ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಎ.ಎಸ್.ಐ.ಖಾಸೀಮ್ ಅಲಿ, ರವೀಂದ್ರಕುಮಾರ, ನಿತ್ಯಾನಂದ ಮತ್ತು ನಾಸೀರ್ ಅವರು ಗಸ್ತಿನಲ್ಲಿದ್ದಾಗ ನೂರ್‍ಭಾಗ್ ಹತ್ತಿರ ಇವರಿಬ್ಬರು ಪೊಲೀಸರನ್ನು ನೋಡಿ ಓಡಿ ಹೋಗಲು ಯತ್ನಿಸಿದರು. ಆಗ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿ ಪರಿಶೀಲನೆ ನಡೆಸಿದಾಗ ಮೊಬೈಲ್ ಕಳ್ಳತನ ಮಾಡಿ ಮಾರಾಟ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.