ಕೋಲಾರ,ಏ,೧೧- ಕೋಲಾರ ನಗರ ಠಾಣೆಯ ಪೊಲೀಸರು ಅರೋಪಿಯೊರ್ವನನ್ನು ಬಂಧಿಸಿ,ಅತನಿಂದ ರೂ ೫,೫೯ ಲಕ್ಷ ಮೌಲ್ಯದ ೩೧ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ,
ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಿರುವ ೧೦ ಮೊಬೈಲ್‌ಗಳ ಮೌಲ್ಯವು ಸುಮಾರು ೧,೮೦ ಲಕ್ಷ ರೂಗಳಾಗಿದೆ ಅಂದಾಜಿಸಲಾಗಿದೆ. ಉಳಿದಂತೆ ಮೊಬೈಲ್ ಕಳವು ಅಗಿರುವವರು ಠಾಣೆಗೆ ಭೇಟಿ ನೀಡಿ ತಮ್ಮ ಮೊಬೈಲ್ ಇದ್ದರೆ ಸಾಕ್ಷಾಧರಗಳನ್ನು ನೀಡಿ ಪಡೆದು ಕೊಳ್ಳ ಬಹುದಾಗಿದೆ ಎಂದು ತಿಳಿಸಲಾಗಿದೆ.
ಗ್ರಾಮಾಂತರ ಠಾಣೆಯ ಪೊಲೀಸ್ ಶಂಕರಪ್ಪ .ಸಿ. ಎಂಬುವರು ಅತ್ಯಂತ ಶ್ರಮದಿಂದ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆಯ ಜೀತೆಗೆ ಬಹುಮಾನವನ್ನು ಘೋಷಿಸಿದ್ದಾರೆ.