ಮೊಬೈಲ್ ಕಳ್ಳತನ ಆರೋಪಿ ಬಂಧನ

ವಿಜಯಪುರ,ಜೂ.9-ನಗರ ಹೊರ ವಲಯದ ಐನಾಪುರ ಗ್ರಾಮದ ಬಳಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ,ಆತನಿಂದ 1.50 ಲಕ್ಷ ರೂ.ಗಳ ಮೌಲ್ಯದ 14ಮೊಬೈಲ್ ಅನ್ನು ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಆಹೇರಿಯ ಮೊಹ್ಮದ ಹಸನಸಾಬ ಜಾತಗಾರ (28)ಬಂಧಿತ ಆರೋಪಿ.
ಮೊಹ್ಮದ ಜಾತಗಾರ ಬೈಕ್‌ನಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದಾಗ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ವಿಚಾರಣೆಗೆ ಒಳಪಡಿಸಿ, ದಸ್ತಗಿರಿ ಮಾಡಿದಾಗ, ವಿವಿಧ ಕಂಪನಿಯ 14 ಮೊಬೈಲ್ ಪತ್ತೆಯಾಗಿದೆ. ಆರೋಪಿಯಿಂದ ಮೊಬೈಲ್ ಹಾಗೂ ಬೈಕ್ ಅನ್ನು ಜಪ್ತಿ ಮಾಡಲಾಗಿದೆ.ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.