ಮೊಬೈಲ್ ಆದ ಹಣ್ಣು ತರಕಾರಿ ವ್ಯಾಪಾರ ಪೊಲೀಸರಿಂದ ಅನಗತ್ಯ ಸಂಚಾರಕ್ಕೆ ಕಡಿವಾಣ

ಹೊಸಪೇಟೆ ಮೇ18: ಅಗತ್ಯ ದಿನಸಿ ಹೊರತು ಪಡಿಸಿ ರಸ್ತೆ, ಬಜಾರ್‍ಗಳಲ್ಲಿ ಯಾರನ್ನೂ ವ್ಯಾಪಾರ ವಹಿವಾಟಿಗೆ ಬಿಡಿದ ಮನ ಮನೆಗೆ ತೆರಳಿ ವ್ಯಾಪಾರ ಮಾಡಿ ಎಂದು ವಕ್ಕಲೆಬ್ಬಿಸುವ ಮೂಲಕ ಪೊಲೀಸರು ಕರೋನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ನಗರದ ಮೂರಂಗಡಿ ವೃತ್ತ, ಹಣ್ಣು ತರಕಾರಿ ಮಾರುಕಟ್ಟೆ, ಕಾಯಪಲ್ಲೆ ಮಾರುಕಟ್ಟೆ, ಮದಕರಿ ನಾಯಕ ವೃತ್ತ, ಮಟನ್ ಮಾರ್ಕೆಟ್, ಎಪಿಎಂಸಿ ವೃತ್ತ, ಸಾಯಿಬಾಬಾ ವೃತ್ತ, ಹಂಪಿ ರಸ್ತೆ ಮತ್ತು ಕಾಲೇಜು ರಸ್ತೆಗಳಲ್ಲಿ ಮಾರುತ್ತಿದ್ದ ತರಕಾರಿ, ಹಣ್ಣು ಹಂಪಲಗಳ ಮಾರಾಟ ಸೇರಿದಂತೆ ಯಾವುದೆ ವಸ್ತುಗಳನ್ನು ನಿಂತು ಮಾರಲು ಬಿಡದ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡುವ ಮೂಲಕ ಮನೆ, ಮನೆ ಓಣಿಗಳಲ್ಲಿ ತಮಗೆ ನಿಗದಿತ ಸಮಯದಲ್ಲಿ ಮಾರಾಟ ಮಾಡಬೇಕೇ ಹೊರತು, ಒಂದಡೆ ನಿಂತು ಮಾರುವಂತಿಲ್ಲಾ ಎಂದು ಎಂದು ಹೊಸ ನಿಯಮಾವಳಿಯನ್ನು ಮಾಡುವ ಮೂಲಕ ನಿತ್ಯ ಹೆಚ್ಚಾಗುತ್ತಿರುವ ಕರೋನಾ ನಿಯಂತ್ರಣಕ್ಕೆ ಸೂಕ್ತ ಮಾರ್ಗವನ್ನು ಅನುಸರಿಸುತ್ತಿದ್ದಾರೆ.
ನಿತ್ಯವೂ ಹಣ್ಣು, ತರಕಾರಿ, ಮಾರಾಟ ಮಾಡಲು 10 ಗಂಟೆಯ ವರೆಗೂ ಕಾಲಾವಕಾಶ ವಿದ್ದರೂ ಜನರು ಮೈಮರೆತು ವ್ಯಾಪಾರದಲ್ಲಿ ತೊಡಗಿದ ಕಾರಣ ಜನತಾ ಕಪ್ರ್ಯೂ ಮಾದರಿಯ ಲಾಕ್‍ಡೌನ್ ಇದ್ದರೂ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸರ್ಕಾರಿ ನಿಯಮದಂತೆಯೇ ಓಣಿಗಳಲ್ಲಿ ವ್ಯಾಪಾರ ಮಾಡಿ ಎಂದು ಜನರು ಬಜಾರಕ್ಕೆ ಬಾರದಂತೆ ತಡೆಯುವ ಮೂಲಕ ನಿಯಂತ್ರಣ ಸಾಧಿಸಬಹುದು ಎಂದು ಈ ಕ್ರಮಕ್ಕೆ ಮುಂದಾಗಿದ್ದು ರಸ್ತೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸುವ ಮೂಲಕ ಜನಜಂಗುಳಿ ನಿಯಂತ್ರಿಸುತ್ತಿದೆ.
ಡಿವೈಎಸ್‍ಪಿ ವಿ.ರಘುಕುಮಾರ ನೇತೃತ್ವದ ದುರ್ಗಾಪಡೆ, ಪಟ್ಟಣ ಪೊಲೀಸ ಠಾಣೆ ಸಿಬ್ಬಂದಿ, ಚಿತ್ತವಾಡಿ ಠಾಣೆಯ ಸಿಬ್ಬಂದಿ, ಬಡಾವಣಾ ಠಾಣಾ ಸಿಬ್ಬಂದಿ, ಗ್ರಾಮಾಂತರ ಠಾಣಾ ಸಿಬ್ಬಂದಿಗಳು ಒಂದಡೆಯಾದರೆ ಸಂಚಾರಿ ಠಾಣಾ ಸಿಬ್ಬಂದಿ ಮತ್ತೊಂದಡೆ ಸಂಪೂರ್ಣ ನಗರವನ್ನು ಬೈಪಾಸ್‍ವರೆಗೂ ಸೂತ್ತುವ ಮೂಲಕ ಒಂದು ಹಂತರ ಅನಗತ್ಯ ಸಂಚಾರ ನಿಯಂತ್ರಿಸುವ ಮೂಲಕ ಹೊಸ ಬಗೆಯಲ್ಲಿ ನಿಯಂತ್ರಣಕ್ಕೆ ಮುಂದಾದರು.
ಈ ಮಧ್ಯ ಸಂಜೆವಾಣಿಯೊಂದಿಗೆ ಮಾತನಾಡಿದ ಡಿವೈಎಸ್‍ಪಿ ವಿ.ರಘುಕುಮಾರ ಸರ್ಕಾರ ಹಾಗೂ ಆಡಳಿತ ಮಾಡುತ್ತಿರುವುದು ಜನರ ಜೀವರಕ್ಷಣೆಗಾಗಿ ಎಂಬುದನ್ನು ಅರಿಯದ ಹೊರತು ನಿಯಂತ್ರಣ ಸಾಧ್ಯವಿಲ್ಲಾ ಸಹಕಾರ ನೀಡಲೇಬೇಕು ಇಲ್ಲವಾದರೆ ಕಠಿಣಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು. ಸೋಂಕು ನಿಯಂತ್ರಣಕ್ಕೆ ಬರುವ ವರೆಗೂ ಈ ಕ್ರಮ ಮುಂದುವರೆಯಲಿದೆ