ಮೊಬೈಲ್ ಅಂಗಡಿಗೆ ಬೆಂಕಿ: ಅಪಾರ ಹಾನಿ

ಬೀದರÀ:ನ.2: ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಇಲ್ಲಿಯ ಬಿ.ವಿ.ಬಿ. ಕಾಲೇಜು ರಸ್ತೆಯಲ್ಲಿ ಇರುವ ಎಕ್ಸಿಸ್ ಬ್ಯಾಂಕ್ ಎದುರಿನ ಕಲ್ಪನಾ ಎಸ್ಟೇಟ್ ನಲ್ಲಿಯ ‘ಶ್ರೀ ಸಾಯಿ ಗುರು ಸೆಲ್’ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.ಭಾನುವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಅವಘಡದಿಂದ ಸುಮಾರು 21 ಲಕ್ಷ ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲೀಕ ಸಿದ್ರಾಮ ನಾಗಪ್ಪ ಬಿರಾದಾರ ಗಾಂಧಿಗಂಜ್ ಪೆÇಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಲ್ಲಿ ವಿವಿಧ ಕಂಪನಿಗಳ ಮೊಬೈಲ್ ಗಳು, ಸಿಸಿ ಟಿವಿ ಕ್ಯಾಮೆರಾ, ಮಾನಿಟರ್, ಝೆರಾಕ್ಸ್ ಮಷೀನ್,ಇನ್‍ವರ್ಟರ್, ಕಂಪ್ಯೂಟರ್, ಫರ್ನಿಚರ್ ಮೊದಲಾದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ಹೇಳಿದ್ದಾರೆ.