ಮೊಬೈಲ್​ ವಿಷಯಕ್ಕೆ ಗಲಾಟೆ: ಬಾವಿಗೆ ಹಾರಿ ಸಹೋದರರ ಆತ್ಮಹತ್ಯೆ

ಕಲಬುರಗಿ:ಜ.4: ಮೊಬೈಲ್ ವಿಷಯವಾಗಿ ಹೆತ್ತವರ ಜೊತೆ ಜಗಳವಾಡಿಕೊಂಡಿದ್ದ ಇಬ್ಬರು ಸಹೋದರರು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ.
ಸುನೀಲ್ (17), ಶೇಖರ್ (12) ಆತ್ಮಹತ್ಯೆಗೆ ಶರಣಾದ ಸಹೋದರರು. ಹೊಸ ಮೊಬೈಲ್ ವಿಷಯವಾಗಿ ಮನೆಯಲ್ಲಿ ತಂದೆ-ತಾಯಿಯೊಂದಿಗೆ ಜಗಳವಾಡಿದ್ದ ಸಹೋದರರು, ನೇರವಾಗಿ ಹೊಲಕ್ಕೆ ಹೋಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರಿಗೂ ಈಜು ಬರುತ್ತಿತ್ತು. ಹೀಗಾಗಿ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೇಹಗಳನ್ನು ಹೊರತೆಗೆದಿದ್ದು, ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.