ಮೊದಲ ಹಂತ-30 ಕೋಟಿ ಜನರಿಗೆ ಲಸಿಕೆ

ನವದೆಹಲಿ, ಅ. ೧೭- ಕೊರೋನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ದೇಶದಲ್ಲಿ ೩೦ ಕೋಟಿ ಜನರಿಗೆ ಆರಂಭಿಕ ಹಂತದಲ್ಲಿ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ದೇಶದಲ್ಲಿ ೬೦ ಕೋಟಿ ಜನರಿಗೆ ಲಸಿಕೆ ಅಗತ್ಯವಿದ್ದು ಅದರಲ್ಲಿ ಆರಂಭಿಕ ಹಂತದಲ್ಲಿ ೩೦೦ ದಶಲಕ್ಷ ಜನರನ್ನು ಈ ಸಂಬಂಧ ಈಗಾಗಲೇ ಗುರುತಿಸಿರುವ ಸರ್ಕಾರ ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಉದ್ದೇಶಿಸಿದೆ.

ದೇಶದಲ್ಲಿ ೬೦೦ ದಶಲಕ್ಷ ಜನರಿಗೆ ಲಸಿಕೆಯ ಅಗತ್ಯವಿದೆ. ಹಿನ್ನಲೆಯಲ್ಲಿ ಕನಿಷ್ಠ ೩೦೦ ದಶಲಕ್ಷ ಮಂದಿ ಜನರಿಗೆ ಲಸಿಕೆಯನ್ನು ಮೊದಲ ಹಂತದಲ್ಲಿ ನೀಡುವ ಉದ್ದೇಶ ಹೊಂದಲಾಗಿದೆ

ಆರಂಭಿಕ ಹಂತದಲ್ಲಿ ಅತಿಹೆಚ್ಚು ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಮತ್ತು ಪೊಲೀಸರು, ಪೌರಕಾರ್ಮಿಕರು, ಆರೋಗ್ಯ ಕಾರ್ಯಕರ್ತರು ಮತ್ತು ವಯೋವೃದ್ಧರಿಗೆ ನೀಡಲು ಉದ್ದೇಶಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೊರೊನಾ ಲಸಿಕೆ ಒಮ್ಮೆ ಸಿದ್ಧವಾಗುತ್ತಿದ್ದಂತೆ ಅದನ್ನು ಆದ್ಯತೆ ಮೇರೆಗೆ ಅಗತ್ಯವಿರುವವರಿಗೆ ಮೊದಲು ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು ಈ ನಿಟ್ಟಿನಲ್ಲಿ ಕಾರ್ಯವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ದೇಶದಲ್ಲಿ ೧೩೦ ಕೋಟಿ ಗೂ ಅಧಿಕ ಜನರಿದ್ದು ಅದರಲ್ಲಿ ಆದ್ಯತೆ ಮೇರೆಗೆ ಅವಶ್ಯವಿರುವ ಜನರಿಗೆ ಆರಂಭಿಕ ಹಂತದಲ್ಲಿ ಕೊರೋನಾ ಲಸಿಕೆ ನೀಡಿ ಸೋಂಕು ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ.