ಮೊದಲ ಹಂತದ ಹಳ್ಳಿಫೈಟ್ ; ಮತದಾನಕ್ಕೆ ಗ್ರಾಮೀಣರಲ್ಲಿ ಚುರುಕುಗೊಂಡ ಆಸಕ್ತಿ

ದಾವಣಗೆರೆ ಡಿ.22; ಮೊದಲ ಹಂತದ ಗ್ರಾ.ಪಂ ಚುನಾವಣೆಯು ಜಿಲ್ಲೆಯ ದಾವಣಗೆರೆ, ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕಿನ ಗ್ರಾ.ಪಂಗಳಲ್ಲಿ ಇಂದು ಜರುಗಿದೆ. ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಶೇ41.47 ರಷ್ಟು ಮತದಾನವಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಶೇ.39,ಜಗಳೂರು ಶೇ 42 ಹಾಗೂ ಹೊನ್ನಾಳಿಯಲ್ಲಿ ಶೇ 42.75 ರಷ್ಟು ಮತದಾನ ಜರುಗಿದೆ.
ತೀವ್ರ ಕುತೂಹಲ ಮೂಡಿಸಿರುವ ಗ್ರಾಮೀಣಭಾಗದ ಈ ಚುನಾವಣೆಯು ಸಾಕಷ್ಟು ಪ್ರತಿಷ್ಠೆಯ ಕಣವಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ ಇಂದು ಬೆಳಗಿನಿಂದಲೂ ಮತದಾನ ಪ್ರಕ್ರಿಯೆ ಚುರುಕಿನಿಂದಲೇ ಪ್ರಾರಂಭಗೊAಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆಗಳೊಂದಿಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿದೆ.ಅಧಿಕಾರಿಗಳು ಸ್ಕಾö್ಯನಿಂಗ್ ಹಾಗೂ ಸ್ಯಾನಿಟೈಜೇಷನ್ ಮೂಲಕ ಮತಹಾಕಲು ಅವಕಾಶ ಕಲ್ಪಿಸಿದ್ದಾರೆ. ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ದಾವಣಗೆರೆ ತಾಲ್ಲೂಕಿನ ಹೆಬ್ಬಾಳು,ಲೋಕಿಕೆರೆ,ಹದಡಿ, ರಾಮಗೊಂಡನಹಳ್ಳಿ,ವಿಟ್ಲಾಪುರ,ಬಾಡಾ ಸೇರಿದಂತೆ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ಮೊದಲನೇ ಹಂತ : ದಾವಣಗೆರೆ ತಾಲ್ಲೂಕಿನ 38 ಗ್ರಾ.ಪಂಗಳಿಗೆ ಮತದಾನ ನಡೆದಿದ್ದು ಒಟ್ಟು 275 ಮತಗಟ್ಟೆಗಳ ಪೈಕಿ 260 ಮತಗಟ್ಟೆಗಳಲ್ಲಿ, ಹೊನ್ನಾಳಿ ತಾಲ್ಲೂಕಿನ 28 ಗ್ರಾ.ಪಂ ಗಳ ಒಟ್ಟು 153 ಮತಗಟ್ಟೆಗಳ ಪೈಕಿ 147 ಮತಗಟ್ಟೆಗಳಲ್ಲಿ ಹಾಗೂ ಜಗಳೂರು ತಾಲ್ಲೂಕಿನ 22 ಗ್ರಾ.ಪಂ ಗಳ ಒಟ್ಟು 219 ಮತಗಟ್ಟೆಗಳ ಪೈಕಿ 172 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ ಒಟ್ಟಾರೆ 88 ಗ್ರಾ.ಪಂ ಗಳ 647 ಮತಗಟ್ಟೆಗಳ ಪೈಕಿ 579 ಮತಗಟ್ಟೆಗಳಲ್ಲಿ ಮತದಾನ ಜರುಗಿದೆ. ದಾವಣಗೆರೆ ತಾಲ್ಲೂಕಿನ 38 ಗ್ರಾ.ಪಂಗಳಲ್ಲಿ 281 ಸಾಮಾನ್ಯ 300 ಮಹಿಳೆ ಒಟ್ಟು 581 ಸ್ಥಾನಗಳಿವೆ. 80 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು 2 ಸ್ಥಾನಗಳು ನಾಮಪತ್ರ ಸಲ್ಲಿಸದೇ ಖಾಲಿ ಇದ್ದು ಒಟ್ಟು 499 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಗಳೂರು ತಾಲ್ಲೂಕಿನ 22 ಗ್ರಾ.ಪಂ ಗಳಲ್ಲಿ 194 ಸಾಮಾನ್ಯ, 203 ಮಹಿಳೆ ಒಟ್ಟು 397 ಸ್ಥಾನಗಳಿದ್ದು 100 ಅವಿರೋಧ ಆಯ್ಕೆಯಾಗಿದ್ದು 297 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹೊನ್ನಾಳಿ ತಾಲ್ಲೂಕಿನ 28 ಸ್ಥಾನಗಳಲ್ಲಿ 155 ಸಾಮಾನ್ಯ, 168 ಮಹಿಳೆ ಒಟ್ಟು 323 ಸ್ಥಾನಗಳಿದ್ದು 31 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದು 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲದೇ ಒಟ್ಟು 291 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟಾರೆ ಮೊದಲನೇ ಹಂತದಲ್ಲಿ 88 ಗ್ರಾ.ಪಂ 630 ಸಾಮಾನ್ಯ, 671 ಮಹಿಳೆ ಒಟ್ಟು 1301 ಸ್ಥಾನಗಳಲ್ಲಿ 211 ಅವಿರೋಧ ಆಯ್ಕೆ, 3 ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಕೆ ಇಲ್ಲದೇ ಒಟ್ಟು 1087 ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಎರಡನೇ ಹಂತ : ಹರಿಹರ ತಾಲ್ಲೂಕಿನ 23 ಗ್ರಾ.ಪಂ ಗಳಿಗೆ ಚುನಾವಣೆ ನಡೆಯಲಿದ್ದು 167 ಮತಗಟ್ಟೆ ಗಳ ಪೈಕಿ 152 ಮತಗಟ್ಟೆಗಳಲ್ಲಿ, ಚನ್ನಗಿರಿ ತಾಲ್ಲೂಕಿನ 61 ಗ್ರಾ.ಪಂ ಗಳ ಒಟ್ಟು 368 ಮತಗಟ್ಟೆಗಳ ಪೈಕಿ 343 ಮತಗಟ್ಟೆಗಳಲ್ಲಿ ಹಾಗೂ ನ್ಯಾಮತಿ ತಾಲ್ಲೂಕಿನ 17 ಗ್ರಾ.ಪಂ ಗಳ 97 ಮತಗಟ್ಟೆಗಳ ಪೈಕಿ 93 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಒಟ್ಟಾರೆ 101 ಗ್ರಾ.ಪಂ ಗಳ 632 ಮತಗಟ್ಟೆಗಳ ಪೈಕಿ 588 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.  ಹರಿಹರ ತಾಲ್ಲೂಕಿನ 23 ಗ್ರಾ.ಪಂ ಗಳಲ್ಲಿ 169 ಸಾಮಾನ್ಯ, 182 ಮಹಿಳೆ ಒಟ್ಟು 351 ಸ್ಥಾನಗಳ ಪೈಕಿ 55 ಅವಿರೋಧ ಆಯ್ಕೆ, 1 ನಾಮಪತ್ರ ಸಲ್ಲಿಕೆ ಇಲ್ಲ ಸೇರಿ ಒಟ್ಟು 295 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನ್ಯಾಮತಿಯಲ್ಲಿ 17 ಗ್ರಾ.ಪಂ ಗಳಲ್ಲಿ 94 ಸಾಮಾನ್ಯ 102 ಮಹಿಳೆ ಒಟ್ಟು 196 ಸ್ಥಾನಗಳ ಪೈಕಿ 15 ಅವಿರೋಧ ಆಯ್ಕೆ 5 ನಾಮಪತ್ರ ಸಲ್ಲಿಕೆ ಇಲ್ಲದೇ ಒಟ್ಟು 176 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 61 ಗ್ರಾ.ಪಂ ಗಳಲ್ಲಿ 354 ಸಾಮಾನ್ಯ, 381 ಮಹಿಳೆ ಒಟ್ಟು 735 ಸ್ಥಾನಗಳ ಪೈಕಿ 93 ಅವಿರೋಧ ಆಯ್ಕೆಯಾಗಿದ್ದು ಒಟ್ಟು 642 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಒಟ್ಟಾರೆ 101 ಗ್ರಾ.ಪಂ ಗಳ 617 ಸಾಮಾನ್ಯ, 665  ಮಹಿಳೆ ಸೇರಿ ಒಟ್ಟು 1285 ಸ್ಥಾನಗಳ ಪೈಕಿ 163 ಅಭ್ಯರ್ಥಿಗಳ ಅವಿರೋಧ ಆಯ್ಕೆ, 6 ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಕೆಯಾಗದೇ ಒಟ್ಟು 1113 ಸ್ಥಾನಗಳಿಗೆ ಚುನಾವಣೆ ನಡೆದಿದೆ.ನ್ಯಾಮತಿ ತಾಲ್ಲೂಕಿನ ಗುಡ್ಡಹಳ್ಳಿ ಗ್ರಾಮ ಪಂಚಾಯಿತಿಯ ಜೀನಹಳ್ಳಿ ಕ್ಷೇತ್ರದ 5 ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸ್ವೀಕೃತವಾಗಿರುವುದಿಲ್ಲ. ಹರಿಹರ ತಾಲ್ಲೂಕಿನ ಎಳೆಹೊಳೆ ಗ್ರಾಮ ಪಂಚಾಯಿತಿ ಮಳಲಹಳ್ಳಿ 01 ಸ್ಥಾನಕ್ಕೆ ನಾಮಪತ್ರ ಸ್ವೀಕೃತವಾಗಿರುವುದಿಲ್ಲ.ಉಳಿದ ಗ್ರಾಮಗಳಲ್ಲಿ ಮತದಾನ ನಡೆಯಲಿದೆ.
ಬಾಕ್ಸ್
ದಾವಣಗೆರೆ ತಾಲ್ಲೂಕಿನ ಮುಚ್ಚನೂರು ಗ್ರಾಮದ ಮತದಾನದ ಕೇಂದ್ರದಲ್ಲಿ ಕೋವಿಡ್ ನಿಯಮ ಪಾಲನೆಯಾಗದ ಕಾರಣ ಮಾಧ್ಯಮದವರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹರಿಹಾಯ್ದ ಘಟನೆ ಜರುಗಿದೆ. ಸಾಮಾಜಿಕ ಅಂತರ ಪಾಲನೆ ಮಾಡದ ಹಾಗೂ ಮಾಸ್ಕ್ ಧರಿಸ ಹಿನ್ನೆಲೆಯಲ್ಲಿ ಮಾಧ್ಯಮದವರು ಪ್ರಶ್ನಿಸಿದ್ದಾರೆ ಇದರಿಂದ ಮಾತಿನಚಕಮಕಿ ನಡೆದಿದೆ.
ಜಿಲ್ಲಾಧಿಕಾರಿ-ಜಿಲ್ಲಾರಕ್ಷಣಾಧಿಕಾರಿ ಭೇಟಿ
ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಅವರುಗಳು ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.

ಮತಎಣಿಕೆ ಕೇಂದ್ರ ವಿವರ:
ದಾವಣಗೆರೆ ತಾಲ್ಲೂಕಿನಲ್ಲಿ ಮೋತಿ ವೀರಪ್ಪ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು, ದಾವಣಗೆರೆ. ಜಗಳೂರು ತಾಲ್ಲೂಕಿನಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜ್, ಜಗಳೂರು. ಹೊನ್ನಾಳಿ ತಾಲ್ಲೂಕಿನಲ್ಲಿ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತಿç ಕೈಗಾರಿಕಾ ತರಬೇತಿ ಕೇಂದ್ರ ಹಿರೇಕಲ್ಮಠ, ಹೊನ್ನಾಳಿ. ನ್ಯಾಮತಿ ತಾಲ್ಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಶಿವಾನಂದಪ್ಪ ಬಡಾವಣೆ ರಸ್ತೆ, ನ್ಯಾಮತಿ. ಹರಿಹರ ತಾಲ್ಲೂಕಿನಲ್ಲಿ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆ, ಹರಪನಹಳ್ಳಿ ರಸ್ತೆ, ಹರಿಹರ ತಾಲ್ಲೂಕು. ಚನ್ನಗಿರಿ ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು, ಚನ್ನಗಿರಿ ಇಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ.