ಮೊದಲ ಮಳೆ ನಿರೀಕ್ಷೆಯಲ್ಲಿ….

ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ “ಎಮ್ಮೆತಮ್ಮಣ್ಣ” ಚಿತ್ರ ತೆರೆಗೆ ಬರುವ ಮುನ್ನವೇ ನಿರ್ದೇಶಕ ಕೆ ರಾಜ್ ಶರಣ್ ಸದ್ದುಗದ್ದಲವಿಲ್ಲದೆ ಮತ್ತೊಂದು ಚಿತ್ರ “ಮೊದಲ ಮಳೆ”ಯ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

“ಎಮ್ಮೆ ತಮ್ಮಣ್ಣ ” ಚಿತ್ರ ಕೋಲ್ಕತ್ತಾ ಸೇರಿದಂತೆ ವಿವಿಧ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ. ಚಿತ್ರವನ್ನು ಓಟಿಟಿ ಮೂಲಕ ತೆರೆಗೆ ತರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಕನ್ನಡದಲ್ಲಿ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ರಾಜ ಶರಣ್ ಅದರ ಅನುಭವದ ಆಧಾರದ ಮೇಲೆ ವಿಭಿನ್ನ ಕಥಾಹಂದರದೊಂದಿಗೆ ಕಾಮಿಡಿ ಮತ್ತು ಡ್ರಾಮ ಕಥೆ ಒಳಗೊಂಡಿರುವ ” ಮೊದಲ ಮಳೆ” ಟಾಕಿ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ.

ಮೊದಲ ಮಳೆಯಲ್ಲಿ ಓರ್ವ ಹೀರೋ ಮತ್ತು 10 ನಾಯಕಿಯರು ಇದ್ದಾರೆ .ಇದು ಚಿತ್ರದ ವಿಶೇಷಗಳಲ್ಲಿ ಒಂದು. ರಾಜ ನರಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದು ಸಾಹಿತ್ಯ, ಅಂಜಲಿ, ಪೂಜಾ ರಾಮಚಂದ್ರ, ಭಾನುಪ್ರೀಯ, ಉಷಾ, ರಚನಾ. ಮಮತಾ, ಲಕ್ಷ್ಮೀ,ಸೇರಿ ಬರೋಬ್ಬರಿ ಹತ್ತು ಮಂದಿ ನಾಯಕಿಯರು.

ಚಿತ್ರಕ್ಕೆ ರಮೇಶ್ ಎಚ್ ಎಲ್ ಬಂಡವಾಳ ಹಾಕಿದ್ದು ಸುಚೇಂದ್ರ ಪ್ರಸಾದ್, ಕರಿಸುಬ್ಬು, ಬ್ಯಾಂಕ್ ಜನಾರ್ದನ್, ಗಣೇಶ್ ರಾವ್, ಜ್ಯೋತಿ ಮರೂರ್, ಉಗ್ರಂ ರೆಡ್ಡಿ ಹಾಗೂ ಇನ್ನಿತರರು ತಾರಾಗಣವಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ರಾಜ ಶರಣ್, “ಮೊದಲ ಮಳೆ” ಗಾಗಿ ಭೂಮಿ ಕಾಯುತ್ತಿರುವಂತೆ ನೂರು ಮಂದಿ ಹುಡುಗಿಯರನ್ನು ನೋಡಿದರೆ ಮದುವೆಯಾಗಲು ಓರ್ವ ಹುಡುಗಿ ನಾಯಕನಿಗೆ ಸಿಗುವುದಿಲ್ಲ. ‘ಮೊದಲ ಮಳೆ”ಗೆ ನಾಯಕನಿಗೆ ಚಿತ್ರದಲ್ಲಿ ಸಂಬಂಧ ಇರಲಿದೆ.ಅದು ಏನು ಎನ್ನುವುದು ಕುತೂಹಲ. ಹೀಗಾಗಿಯೇ ಚಿತ್ರಕ್ಕೆ “ಮೊದಲ ಮಳೆ” ಎಂದು ಹೆಸರಿಡಲಾಗಿದೆ .ಜೀವನ ಅಂಶಗಳು ಚಿತ್ರದಲ್ಲಿರಲಿದೆ ಎಂದರು.

ಕಾಮಿಡಿ,ಡ್ರಾಮ‌ ಕಥೆಯನ್ನು ಚಿತ್ರ ಒಳಗೊಂಡಿದೆ.32 ದಿನಗಳ ಕಾಲ ಟಾಕಿ ಭಾಗ ಚಿತ್ರೀಕರಣ ಮಾಡಲಾಗಿದೆ ನಾಲ್ಕು ಹಾಡುಗಳ ಪೈಕಿ ಮೂರು ಹಾಡು ಬಾಕಿ ಇದೆ. ಚಿತ್ರದ ಶೀರ್ಷಿಕೆ ಗೀತೆಯನ್ನು ವಿಜಯಪ್ರಕಾಶ್ ಹಾಡಿದ್ದಾರೆ. ಒಳ್ಳೆಯ ಸಿನಿಮಾ ಮಾಡಿದ ಖುಷಿಯಿದೆ ಎಡಿಟಿಂಗ್ ಕೂಡ ಮುಗಿದಿದೆ. ಚಿತ್ರದ ಡಬ್ಬಿಂಗ್ ಮಾಡಬೇಕಾಗಿತ್ತು ಲಾಕ್ ಡೌನ್ ನಿಂದ ತಡವಾಗುತ್ತಿದೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರಕ್ಕೆ ಎ.ಟಿ ರವೀಶ್ ಮತ್ತು ಪ್ರಸನ್ನ ಭೋಜ ಶೆಟ್ಟರ್ ಸಂಗೀತವಿದೆ. ಕೃಷ್ಣ ಪೂಜಾರಿ ಛಾಯಾಗ್ರಹಣವಿದೆ.

ಹಲವು ಕಡೆ ಚಿತ್ರೀಕರಣ

ಕ್ಷೇತ್ರವನ್ನು ಬೆಂಗಳೂರು ,ಸಕಲೇಶಪುರ ಸೋಮವಾರಪೇಟೆ, ಕೊಡಗು ಸೇರಿದಂತೆ ಹಲವು ಕಡೆ 32 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಸಂಪೂರ್ಣವಾಗಿ ಟಾಕಿ ಭಾಗ ಮುಕ್ತಾಯವಾಗಿದ್ದು . ಮೂರು ಹಾಡುಗಳ ಚಿತ್ರೀಕರಣ ಬಾಕಿ ಇದ್ದು ಅವುಗಳನ್ನು ಸಕಲೇಶಪುರ, ಹಿಮಾಲಯ ಪ್ರದೇಶ ಮತ್ತು ಮತ್ತೊಂದು ಹಾಡನ್ನು ಮಳೆಯಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ ಎಂದರು ನಿರ್ದೇಶಕ ರಾಜ ಶರಣ್.