ಮೊದಲ ಮಗು ನಿರೀಕ್ಷೆಯಲ್ಲಿ ಅನುಷ್ಕಾ

ಮುಂಬೈ,ಜ.೨-ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇದೀಗ ಅನುಷ್ಕಾ ಅವರ ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ.
ತಮ್ಮ ಪತ್ನಿಗೆ ಕೊರೊನಾ ನೆಗೆಟಿವ್ ಬಂದ ಖುಷಿಯನ್ನು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕೆ ಇಬ್ಬರು ಪಾಸಿಟಿವ್ ಆಗಿ ಒಟ್ಟಾಗೆ ಸಮಯ ಕಳೆಯುತ್ತಿದ್ದೇವೆ. ಸುರಕ್ಷಿತ ವಾತಾವರಣದಲ್ಲಿ ಸ್ನೇಹಿತರೊಂದಿಗೆ ಬೆರೆಯಲು ಇಷ್ಟವಿಲ್ಲದೆ ಮನೆಯಲ್ಲಿಯೇ ಇದ್ದೇವೆ. ಈ ವರ್ಷ ಭರವಸೆ, ಸಂತೋಷ ಮತ್ತು ಉತ್ತಮ ಆರೋಗ್ಯ ತರಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ, ಆಗಾಗ ತಮ್ಮ ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಡಿ.೧೧ ರಂದು ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ದಿನದಂದು ಪತಿ ಜೊತೆಗಿನ ಫೋಟೊ ಹಂಚಿಕೊಂಡಿದ್ದ ಅನುಷ್ಕಾ, ಮದುವೆಯ ಬಂಧನಕ್ಕೆ ಮೂರುವರ್ಷವಾಗಿದೆ. ಶೀಘ್ರದಲ್ಲಿಯೇ ನಾವು ಮೂವರು ಆಗಲಿದ್ದೇವೆ ಎಂದು ಬರೆದುಕೊಳ್ಳುವ ಮೂಲಕ ಗರ್ಭಿಣಿಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು.
ವಿರಾಟ್ ಹಾಗೂ ಅನುಷ್ಕಾ ೨೦೧೭ರ ಡಿಸೆಂಬರ್ ೧೧ ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.