ಮೊದಲ ಬಾರಿಗೆ ಫೈಟ್ ಮಾಡಿದ್ದೇನೆ: ಸವಾಲಿನಿಂದ ಕೂಡಿದ ಪಾತ್ರ

ಸಿನಿಮಾ ಮತ್ತು ಜಾಹೀರಾತು ಲೋಕದಲ್ಲಿ ಜೊತೆ ಜೊತೆಯಲ್ಲಿ ಕೆಲಸ ಮಾಡುತ್ತಲೇ ಕಾಸ್ಟೂಮ್ ಡೀಸೈನ್‍ಗೂ ಸೈ ಎಂದು  ಸಿಕ್ಕ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಮೆಚ್ಚುಗೆ ಪಡೆದವರು ನಟಿ ಶ್ರಾವ್ಯ ರಾವ್.

ಇದೀಗ “ಮಾಯಾನಗರಿ” ಚಿತ್ರದಲ್ಲಿ ಮಲ್ಲಿಕಾ ಎನ್ನುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರಾವ್ಯಗೆ ಈ ಚಿತ್ರ ತೆರೆಗೆ ಬಂದ ನಂತರ ಅನೇಕ ಚಿತ್ರಗಳಲ್ಲಿ ಅವಕಾಶ ಸಿಗಲಿದೆ. ಜೊತೆಗೆ ಚಿತ್ರರಂಗ ಮತ್ತಷ್ಟು ಗುರುತಿಸುತ್ತವೆ ಎನ್ನುವ ವಿಶ್ವಾಸ ಮತ್ತು ಕನಸು ಕಟ್ಟಿಕೊಂಡಿದ್ದಾರೆ.

“ಮಾಯಾನಗರಿ” ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುವ ಜೊತೆ ಜೊತೆಗೆ ಚಿತ್ರಕ್ಕೆ ಕಾಸ್ಟೂಮ್ ಡಿಸೈನ್ ಮಾಡಿ ನಿರ್ದೇಶಕ ನಿರ್ಮಾಪಕರೂ ಆಗಿರುವ ಶಂಕರ್ ಆರಾಧ್ಯ ಸೇರಿದಂತೆ ಚಿತ್ರತಂಡದ ಮನಗೆದ್ದಿದ್ದಾರೆ.

ಚಿತ್ರದ ತಮ್ಮ ಕೆಲಸದ ಕುರಿತು ಮಾಹಿತಿ ಹಂಚಿಕೊಂಡ ಶ್ರಾವ್ಯ, ಚಿತ್ರದಲ್ಲಿ ಮಲ್ಲಿಕಾ ಎನ್ನುವ ಪಾತ್ರ. .ಚಿತ್ರದಲ್ಲಿ ನಿರ್ದೇಶಕರು ಆ ಸ್ಥಳಕ್ಕೆ ಬಂದಾಗ ಮಲ್ಲಿಕಾ ಎನ್ನುವ ಹುಡುಗಿ ಸಿಗ್ತಾಳೆ. ಆ ಹುಡುಗಿ ಏನು, ಆಕೆ ಹಿನ್ನೆಲೆ ಏನು, ಯಾವುದಾದರೂ ಸಮಸ್ಯೆ ಸಿಲುಕಿರುತ್ತಾಳಾ ಎನ್ನುವುದು ಚಿತ್ರದ ಕಥನ ಕುತೂಹಲ.

ಯಾವುದೇ ಪಾತ್ರ ಒಪ್ಪಿಕೊಂಡ ನಂತರ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತೇನೆ. ಪಾತ್ರಕ್ಕೆ ಶೇಕಡಾ ನೂರರಷ್ಟು ನ್ಯಾಯ ಒದಗಿಸುವುದು ನನ್ನ ಉದ್ದೇಶ, ಆ ಕೆಲಸವನ್ನು ಇಲ್ಲಿಯೂ ಮಾಡಿದ್ದೇನೆ. ಚಿತ್ರದಲ್ಲಿ ಮೊದಲ ಬಾರಿಗೆ ಆಕ್ಷನ್ ಮಾಡಿದ್ದೇನೆ. ಸಾಹಸ ದೃಶ್ಯದಲ್ಲಿ ಒಂದಷ್ಟು ನೋವಾಗಿತ್ತು. ಆದರೂ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ.

ಫೈಟಿಂಗ್ ಜೊತೆ ಜೊತೆಯಲ್ಲಿಯೇ ಎಮೋಷನ್, ಕೋಪ, ಡ್ರಾಮ ಒಟ್ಟಿಗೆ ಹೋಗಬೇಕಾಗಿತ್ತು. ಪ್ರತಿ ಸನ್ನಿವೇಶವೂ ಸವಾಲಿನಿಂದ ಕೂಡಿತ್ತು. ಚಿತ್ರದ ಕಥೆ ಎಲ್ಲ ಕಾಲಕ್ಕೂ ಸಲ್ಲುವಂತಹುದು. ತಡವಾದರೂ ಲೇಟೆಸ್ಟ್ ಆಗಿ ಬರುತ್ತಿದ್ದೇವೆ . ಜನರಿಗೆ ಇಷ್ಟವಾದರೆ ಎಷ್ಟು ದಿನ, ವರ್ಷ ಎನ್ನುವುದು ಮುಖ್ಯವಾಗುವುದಿಲ್ಲ, ಬದಲಾಗಿ ಕಥೆ, ಅಭಿನಯ ಚಿತ್ರ ಮೂಡಿ ಬಂದಿರುವುದೇ ಅಂತಿಮವಾಗಲಿದೆ ಎಂದರು,

ಚಿತ್ರದ ¯ಚ್ಚಿ ಲಚ್ಚಿ ಹಾಡಿಗೆ ನಾನೇ ಕಾಸ್ಟೂಮ್ ಡಿಸೈನ್ ಮಾಡಿದ್ದೇನೆ, ಮೊದಲಿನಿಂದಲೂ ಆಸಕ್ತಿ ಇದ್ದುದರಿಂದ ಡಿಸೈನ್ ಮಾಡಬಹುದಾ ಎಂದು ನಿರ್ದೇಶಕರನ್ನು ಕೇಳಿದೆ, ಅವಕಾಶ ಮಾಡಿಕೊಟ್ಟರು. ಪ್ರೀತಿ ಮತ್ತು ಖುಷಿಯಿಂದ ಕೆಲಸ ಮಾಡಿದ್ದೇನೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ

ಮೊದಲ ಬಾರಿಗೆ ಫೈಟ್

ಚಿತ್ರಕ್ಕಾಗಿ 100 ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ, ಮೊದಲ ಭಾರಿಗೆ ಸಾಹಸ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೇವೆ. ಒಂದಷ್ಟು ಎಮೋಷನ್ ಇರುವ ರೋಮಾಂಟಿಕ್ ಡ್ರಾಮ “ ಮಾಯಾನಗರಿ”. ಚಿತ್ರ ಎಲ್ಲಿರಿಗೂ ಇಷ್ಟವಾಲಿದೆ ಎನ್ನುವ ವಿಶ್ವಾಸ ನಟಿ ಶ್ರಾವ್ಯಾ ರಾವ್ ಅವರದು.

ಚಿತ್ರದ ಚಿತ್ರೀಕರಣದಲ್ಲಿ ನಿರ್ದೇಶಕ ಶಂಕರ್ ಆರಾಧ್ಯ ಅವರು ಯಾವುದಕ್ಕೂ ಕಾಂಪ್ರಮೈಸ್ ಮಾಡಿಕೊಂಡಿಲ್ಲ. ಹೀಗಾಗಿ ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂಸಿದೆ, ಚಿತ್ರದಲ್ಲಿ ಎಮೋಷನ್, ಕೋಪ, ಪ್ರೀತಿ ಸೇರಿದಂತೆ ಹಲವು ವಿಷಯವನ್ನು ಏಕಕಾಲದಲ್ಲಿ ತೋರಿಸುವುದು ಸವಾಲಿನ ಕೆಲಸವಾಗಿತ್ತು ಎನ್ನವು ಮಾಹಿತಿ ಹಂಚಿಕೊಂಡರು

ಆಕ್ಷನ್,ಫ್ಯಾಮಿಲಿ ಸಿನಿಮಾ

ಹಾರರ್ ಆಕ್ಷನ್,ಫ್ಯಾಮಿಲಿ ಸೆಂಟಿಮೆಂಟ್ ಕಥೆ ಒಳಗೊಂಡಿದೆ. ಚಿತ್ರದಲ್ಲಿ ನಾಯಕ ಶಂಕರ್ ನಾಗ್ ದೊಡ್ಡ ಅಭಿಮಾನಿ. ನಿರ್ದೇಶಕನಾಗಬೇಕು  ಎನ್ನುವ ಹಂಬಲ ಹೊತ್ತು ಚಿತ್ರರಂಗದಕ್ಕೆ ಬರುತ್ತಾನೆ. ಅವನಿಗೆ ಅವಕಾಶ ಸಿಕ್ಕಿ ಮಾಯಾನಗರಿ ಎನ್ನುವ ಸ್ಥಳಕ್ಕೆ ಹೋಗಬೇಕಾಗುತ್ತದೆ. ಆ ಊರಿಗೆ ಬರುವ ಆತ ಅಲ್ಲಿ ತಾನೇ ಪಾತ್ರವಾಗುವ ಕಥೆಯನ್ನು ನಿರ್ದೇಶಕ ಶಂಕರ್ ಆರಾಧ್ಯ ಚಿತ್ರವನ್ನು ತೆರೆಗೆ ಕಟ್ಟಿಕೊಡಲು ಸಜ್ಜಾಗಿದ್ದಾರೆ.