ಮೊದಲ ಪುಟ ನಾಯಿ ಇದೆ ಎಚ್ಚರಿಕೆ

ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಯ ಚಿತ್ರಗಳು ಸೆಟ್ಟೇರುತ್ತಿವೆ ಅದರ ಸಾಲಿಗೆ ಮತ್ತೊಂದು‌ ಹೊಸ ಸೇರ್ಪಡೆ.‌ ” ನಾಯಿ ಇದೆ ಎಚ್ಚರಿಕೆ”. ಸಾಮಾನ್ಯವಾಗಿ ಮನೆ ಮುಂದೆ ನಾಯಿ ಇದೆ ಎನ್ನುವ ಬೋರ್ಡ್ ನಾವೆಲ್ಲರೂ ನೋಡಿದ್ದೇವೆ.ಈಗ ಚಿತ್ರರಂಗದ ‘ನಾಯಿ ಇದೆ ಎಚ್ಚರಿಕೆ’ ಎನ್ನುವ ಕುತೂಹಲ ಹೆಚ್ಚುವಂತೆ ಮಾಡಿದೆ ಇಲ್ಲೊಂದು ತಂಡ.

ಜೊತೆಗೆ ಚಿತ್ರದಲ್ಲಿ ಜರ್ಮನ್ ಶಫರ್ಡ್ ತಳಿಯ ಕಪ್ಪು‌ಚಿರತೆಯಂತಿರುವ ಕೆಂಪು ಕಣ್ಣಿನ “ರೂಬಿ’ಯದ್ದೇ ಸದ್ದು ಮಾಡುತ್ತಿದೆ.”ನಾಯಿ ಇದೆ ಎಚ್ಚರಿಕೆ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದೆ.

ವೈರಸ್ ಆಧಾರಿತ ಕಥಾಹಂದರವಿರುವ ಸಿನಿಮಾ‌ ಇದಾಗಿದ್ದು ಜಿ.ಎಸ್ ಕಲಿಗೌಡ ಅಕ್ಷನ್ ಕಟ್ ಹೇಳುತ್ತಿದ್ದು  ನಿರ್ಮಾಪಕ ಪ್ರಬಿಕ್ ಮೊಗವೀರ್ ಬಂಡವಾಳ ಹಾಕಲು ಮುಂದಾಗಿದ್ದಾರೆ‌.

ವೈರಸ್ ಆಧಾರಿತ ಕಥೆ ಇರುವ ಈ ಸಿನಿಮಾದಲ್ಲಿ ನಾಯಿಗೆ ಏನು ಕೆಲಸ ಎಂದು ಕೇಳಿದರೆ, “ಈ ಸಿನಿಮಾದಲ್ಲಿ ನಾಯಿಯ ಪಾತ್ರ ತುಂಬಾ ಭಿನ್ನವಾಗಿದೆ. ಅದರಲ್ಲೂ ಇದೊಂದು ಕಾಮಿಡಿ,ಮನರಂಜನೆಯಿಂದ ಕೂಡಿದ ಸಿನಿಮಾ. ಇದರಲ್ಲಿ ನಾಯಿ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದೂ ಅಲ್ಲದೇ ಒಂದು ಒಳ್ಳೆಯ ಸಾಮಾಜಿಕ ಸಂದೇಶವನ್ನೂ ಸಾರಲಿದೆ’ ಎನ್ನುತ್ತಾರೆ ನಿರ್ಮಾಪಕ  ಪ್ರಬಿಕ್.

ರೂಬಿಯನ್ನು ‘ಶ್ವಾನ‌ಪ್ರಿಯ ಸ್ವಾಮಿ ಬಳಿ ತೆಗೆದುಕೊಳ್ಳಲಾಗಿದೆ.  ನಟನೆ ನೀವು ಪರದೆಯ ಮೇಲೆ ನೋಡಿದರೆ ನಿಜಕ್ಕೂ ಬೆರಗಾಗುತ್ತೀರಾ’ ಎನ್ನುತ್ತಾರೆ  ಅವರು. “ತನಿಖೆ’ ಮೂಲಕ ನಿರ್ದೇಶಕರಾದ ಜಿ.ಎಸ್.ಕಲಿಗೌಡ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರದಲ್ಲಿ ಬಹುತಾರಾಂಗಣವಿದೆ. ಅನುಭವಿ ಕಲಾವಿದರು ಇದ್ದಾರೆ ಎಂದು ಹೇಳಿರುವ ಚಿತ್ರತಂಡ, ಕಲಾವಿದರ ಹೆಸರನ್ನು ಬಿಟ್ಟುಕೊಟ್ಟಿಲ್ಲ.

‘ಕ್ರಿಸ್ಟೋಫರ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬರುತ್ತಿವೆ.ಶ್ಯಾಮ್ ಸಿಂಧನೂರು ಕ್ಯಾಮರಾ  ಚಿತ್ರಕ್ಕೆ ಇರಲಿದೆ.