ಮೊದಲ ದಿನವೇ ೩ ಕೋಟಿ ಲಸಿಕೆ ಹಾಕುವ ಗುರಿ


ನವದೆಹಲಿ, ಜ.೧೪- ಕೊರೊನಾ ಸೋಂಕಿಗೆ ಲಸಿಕೆ ಹಾಕುವ ವಿಶ್ವದ ಬೃಹತ್ ಲಸಿಕಾ ಕಾರ್ಯಕ್ರಮ ಇದೇ ೧೬ ರಿಂದ ದೇಶದಲ್ಲಿ ಆರಂಭವಾಗಲಿದ್ದು ಮೊದಲ ದಿನವೇ ೩ ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ದೇಶದ ೨೯೩೪ ಕೇಂದ್ರಗಳಲ್ಲಿ ಏಕಕಾಲಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಲಿದೆ. ಮೊದಲ ದಿನವೇ ೩೦೦ ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕಿಗೆ ತುರ್ತು ಬಳಕೆ ಮಾಡಲು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗೆ ಭಾರತೀಯ ಔಷದ ಮಹಾನಿಯಂತ್ರಕ – ಡಿಸಿಜಿಐ ಅನುಮತಿ ನೀಡಿದೆ. ಕೋವಿಶೀಲ್ಡ್ ಪ್ರತಿ ಡೋಸ್ ಗೆ ೨೦೦ ರೂಪಾಯಿ ಮತ್ತು ಕೋವಾಕ್ಸಿನ್ ಪ್ರತಿ ಡೋಸ್ ಗೆ ೨೯೫ ರೂಪಾಯಿ ದರ ನಿಗಧಿ ಮಾಡಲಾಗಿದೆ.
ತುರ್ತು ಬಳಕೆಗೆ ಅನುಮತಿ ಪಡೆದಿರುವ ಎರಡು ಲಸಿಕೆಗಳು ಸುರಕ್ಷಿತವಾಗಿವೆ .ಹೀಗಾಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.

ಲಸಿಕೆ ಸಂಗ್ರಹಣೆ:
ಜನವರಿ ೧೬ ರಿಂದ ದೇಶಾದ್ಯಂತ ಲಸಿಕೆ ಹಾಕುವ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಲಸಿಕೆಯನ್ನು ಸಂಗ್ರಹ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ
೧.೬೫ ಕೋಟಿ ಕೋವಿಶೀಲ್ಡ್ ಮತ್ತು ಇನ್ನುಳಿದ ಡೋಸ್ ಕೋವಾಕ್ಸಿನ್ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.


೨೩೬೦ ತರಬೇತುದಾರರು
ದೇಶಾದ್ಯಂತ ಕೊರೊನಾ ಲಸಿಕೆ ಹಾಕಲು ೨೩೬೦ ಮಾಸ್ಟರ್ ತರಬೇತಿದಾರರು, ೬೧೦೦೦ ಕಾರ್ಯಕ್ರಮ ವ್ಯವಸ್ಥಾಪಕರು,
೨ ಲಕ್ಷ ಲಸಿಕೆ ಹಾಕುವವರು ಮತ್ತು ೩.೭ ಲಕ್ಷ ಲಸಿಕೆ ಹಾಕುವ ತಂಡದ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ೧ ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ೨ ಕೋಟಿ ಮುಂಚೂಣಿ ಕಾರ್ಯಪಡೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಲಸಿಕೆ ಹಾಕಲಾಗುವುದು. ಎರಡನೇ ಹಂತದಲ್ಲಿ ೨೭ ಕೋಟಿ ಜನರಿಗೆ ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಅವರು ಹಾಕಲಾಗುವುದು ಎಂದುಹೇಳಿದ್ದಾರೆ.

ರಾಜ್ಯಮಟ್ಟದಲ್ಲಿ ಕನಿಷ್ಠ ಒಂದು ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರವನ್ನು ತೆರೆಯಲಾಗಿದೆ ಅಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಲಸಿಕೆಯನ್ನು ಈಗಾಗಲೇ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ