ಮೊದಲ ಚುಂಬನ ಫೋಟೊ ಹಂಚಿಕೊಂಡ ಜಾಕಿ-ಪ್ರೀತ್

ಗೋವಾ,ಫೆ.೨೨-ನಟ ಮತ್ತು ಚಿತ್ರ ನಿರ್ಮಾಪಕ ಜಾಕಿ ಭಗ್ನಾನಿ ಈಗ ತನ್ನ ಲೇಡಿ ಲವ್ ರಾಕುಲ್ ಪ್ರೀತ್ ಸಿಂಗ್ ಅವರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವಾಗ, ’ನನ್ನದು ಮತ್ತು ಈಗ ಯಾವಾಗಲೂ ನನ್ನದು..’ ಎಂದು ನಟಿ ಬರೆದಿದ್ದಾರೆ.
ದಂಪತಿಗಳು ತಮ್ಮ ಮೊದಲ ಚುಂಬನ ಫೋಟೋ ಸಹ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ .


ರಾಕುಲ್ ಮತ್ತು ಜಾಕಿ ಸಿಖ್ ಮತ್ತು ಸಿಂಧಿ ಸಂಪ್ರದಾಯಗಳ ಪ್ರಕಾರ ಗೋವಾದಲ್ಲಿ ವಿವಾಹವಾದರು. ಅವರ ಫೋಟೋಗಳನ್ನು ಈಗ ದಂಪತಿಗಳು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಅವರ ಮೊದಲ ಮದುವೆಯ ಫೋಟೋಗಳು ಸಹ ಬಹಿರಂಗವಾಗಿವೆ. ಇಬ್ಬರೂ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅಂತರ್ಜಾಲದಲ್ಲಿ ವೈರಲ್ ಆಗಿದೆ
ಇಬ್ಬರೂ ತಮ್ಮ ವಿಶೇಷ ದಿನಕ್ಕಾಗಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಆರಿಸಿಕೊಂಡಿದ್ದಾರೆ. ಹೂವಿನ ಕಸೂತಿ ಲೆಹೆಂಗಾ ಮತ್ತು ಗುಲಾಬಿ ಬಣ್ಣದ ಬಳೆಗಳಲ್ಲಿ ರಾಕುಲ್ ತುಂಬಾ ಮುದ್ದಾಗಿ ಕಂಗೊಳಿಸಿದ್ದಾರೆ ಅವರು ಮುಖದಲ್ಲಿ ವಧುವಿನ ಕಳೆ ಎದ್ದು ಕಾಣುತ್ತಿದ್ದು,
ಜಾಕಿ ಭಗ್ನಾನಿ ಕೆನೆ-ಚಿನ್ನದ ಶೆರ್ವಾನಿಯೊಂದಿಗೆ ದೊಡ್ಡ ಹಾರವನ್ನು ಧರಿಸಿದ್ದರು.
ರಾಕುಲ್ ಮತ್ತು ಜಾಕಿ ಪೋಸ್ಟ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಜಾಕ್ವೆಲಿನ್ ಫರ್ನಾಂಡಿಸ್, ಸಮಂತಾ ರುತ್ ಪ್ರಭು, ರಿತೇಶ್ ದೇಶ್‌ಮುಖ್, ದಿಯಾ ಮಿರ್ಜಾ, ವಿಜಯ್ ವರ್ಮಾ, ಅಥಿಯಾ ಶೆಟ್ಟಿ, ವರುಣ್ ಧವನ್, ಮೃಣಾಲ್ ಠಾಕೂರ್ ಸೇರಿದಂತೆ ಹಲವು ತಾರೆಯರು ನವ ವಧು-ವರರಿಗೆ ಶುಭ ಕೋರಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಐಟಿಸಿ ಗ್ರ್ಯಾಂಡ್ ಸೌತ್ ಗೋವಾ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆತ್ಮೀಯ ಸ್ನೇಹಿತರನ್ನು ಮಾತ್ರ ಆಹ್ವಾನಿಸಿದ್ದರು. ಅವರಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ ಮತ್ತು ಇತರರು ಇದ್ದರು.