ಮೊದಲ ಕಂತಿನಲ್ಲಿ ದೊರೆಯದ ಸಚಿವ ಸ್ಥಾನದ  ಭಾಗ್ಯ ಶಾಸಕ ನಾಗೇಂದ್ರ ಬೆಂಬಲಿಗರ ಅಸಮಾಧಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.20: ಇಂದು ರಚನೆಯಾದ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಬಿಜೆಪಿಯ ಉನ್ನತ ನಾಯಕ ಶ್ರೀರಾಮುಲು ಅಂತಹವರನ್ನು ಸೋಲಿಸಿದ ಖ್ಯಾತಿಯ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ನಾಗೇಂದ್ರ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಇಂದು ಸಚಿವ ಸ್ಥಾನ ನೀಡಿರುವ  ಎಂಟು ಜನರಲ್ಲಿ ಬಹುತೇಕರು ಸುಲಭವಾಗಿ ಜಯ ಸಾಧಿಸಿದವರು. ಆದರೆ ಪಕ್ಷದಲ್ಲಿ ಹಿಡಿತಹೊಂದಿದವರಾಗಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಮೂವರಿಗೆ ಅವಕಾಶ ನೀಡಿದೆ.
ಮೊದಲ ಹಂತದಲ್ಲೇ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಿದೆ ಎಂಬ ವಿಶ್ವಾಸದಿಂದ ಅವರ ಸಾವಿರಾರು ಬೆಂಬಲಿಗರು ಇಂದು ಬೆಂಗಳೂರಗೆ ತಲುಪಿದ್ದರು. ಆದರೆ ಮೊದಲ ಹಂತದಲ್ಲಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡದೇ ಹೋಗಿದ್ದು ಅವರ ಬೆಂಬಲಿಗರಲ್ಲಿ ಬೇಸರ ತರಿಸಿದೆಯಂತೆ.
ಆದರೆ ಬಲ್ಲ ಮೂಲಗಳ ಪ್ರಕಾರ. ಕಲಘಟಕಿ ಶಾಸಕ ಸಂತೋಷ್ ಲಾಡ್ ಮತ್ತು ಗ್ರಾಮಿಣ ಶಾಸಕ ನಾಗೇಂದ್ರ ಅವರಿಗೆ ಎಐಸಿಸಿ ಮಟ್ಟದಲ್ಲಿ ಗ್ಯಾರೆಂಟಿ ಆಗಿದ್ದು ಎರಡನೇ ಕಂತಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಇವರಿಗೆ ಸಚಿವ ಸ್ಥಾನ ಖಚಿತವಾಗಿ ದೊರೆಯಲಿದೆಂಬ ಮಾಹಿತಿ ಇದೆ.