ಮೊದಲು ರಾಜ್ಯದ ಇತರೆ ಬೃಹತ್ ಜಿಲ್ಲೆಗಳ ವಿಭಜನೆಯಾಗಲಿ: ನಾಗೇಂದ್ರ

ಬಳ್ಳಾರಿ ನ 20 : ರಾಜ್ಯದಲ್ಲಿ ಬೃಹತ್ ಜಿಲ್ಲೆಗಳಾಗಿರುವ ಬೆಳಗಾವಿ, ಶಿವಮೊಗ್ಗ, ತುಮಕೂರು ಕಲ್ಬುರ್ಗಿ ಜಿಲ್ಲೆಗಳಲ್ಲಿ ಹೆಚ್ಚು ತಾಲೂಕುಗಳಿವೆ. ಅವನ್ನು ವಿಭಜನೆ ಮಾಡದೇ, ಏಕಾ, ಏಕಿ ಬಳ್ಳಾರಿ ಜಿಲ್ಲೆಯ ವಿಭಜನೆ ಯಾಕೆ ಎಂದು ಗ್ರಾಮೀಣ ಶಾಸಕ‌ ಬಿ.ನಾಗೇಂದ್ರ ಪ್ರಶ್ನಿಸಿದ್ದಾರೆ.
ಅವರಿಂದು ನಗರದ ತಮ್ಮ ನಿವಾಸದ ಬಳಿ‌ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ. ಮೊದಲು ರಾಜ್ಯದ ಇತರೇ ಬೃಹತ್ ಜಿಲ್ಲೆಗಳನ್ನು ಇಭ್ಭಾಗ ಮಾಡಲಿ ಆನಂತರ ಬಳ್ಳಾರಿ ತಂಟೆಗೆ ಬರಲಿ ಎಂದರು.
ಜಿಲ್ಲೆಯ ವಿಭಜನೆಯಾದರೆ ಆಂಧ್ರಪ್ರದೇಶದ ಜನರ ದಬ್ಬಾಳಿಕೆ ಹೆಚ್ಚಾಗುತ್ತದೆ. ಬಳ್ಳಾರಿಯಲ್ಲಿ ಕನ್ನಡ ಭಾಷೆ ಉಳಿಯೋದು ಕಷ್ಟವಾಗುತ್ತದೆ. ಬಳ್ಳಾರಿ ನಗರ, ಗ್ರಾಮೀಣ, ಸಿರುಗುಪ್ಪ, ತೆಲುಗು ಭಾಷೆಯ ಪ್ರಭಾವ ಹೆಚ್ಚಿದೆ. ಜಿಲ್ಲೆ ವಿಭಜನೆಯಾದರೆ ಕನ್ನಡ ನಾಡಿನ ಸಂಸ್ಕೃತಿ ಉಳಿಯಲ್ಲ. ಇದನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲಾ ಎಂದರು.
ಹೊಸ ಜಿಲ್ಲೆಯ ಉದಯದಿಂದ ಪಶ್ಚಿಮ ತಾಲೂಕಿನ ಜನರಿಗೆ ಅನುಕೂಲವಾಗುತ್ತದೆ ಎಂಬುದು ಸ್ವಾಗತ, ಆದರೆ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡುವುದು ಸರಿಯಲ್ಲ. ಒಂದು ವೇಳೆ ವಿಜಯನಗರ ಜಿಲ್ಲೆಯೇ ಆಗಬೇಕೆಂದಾದರೆ ಜಿಲ್ಲಾ ಕೇಂದ್ರ ಹೊಸಪೇಟೆ ಮಾಡಿಕೊಂಡು, ನಮ್ಮನ್ನೂ ಸೇರಿಸಿಕೊಳ್ಳಿ‌ ಎಂದರು.
ಆನಂದ್ ಸಿಂಗ್ ಹೆಸರು ಹೇಳದೆ. ಯಾರದೋ ಒಬ್ಬರ ವೈಯಕ್ತಿಕ ಹಿತಾಸಕ್ತಿಗೆ ಜಿಲ್ಲೆ ವಿಭಜನೆಗೆ ಕೈ ಹಾಕಿದರೆ ಸರಿಯಲ್ಲ ಎಂದರು.
ವಿಧಾನ‌ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರು ನೂತನ ಜಿಲ್ಲೆ ರಚನೆ ಸ್ವಾಗತ ಮಾಡಿದ್ದು, ಅದು ಅವರ ವೈಯಕ್ತಿಕ ಅಭಿಪ್ರಾಯ.‌ ಆದರೆ ಬಳ್ಳಾರಿ ಜಿಲ್ಲೆಯ ಬಿಜೆಪಿಯ ಬಲಿಷ್ಠ ಶಾಸಕರು ಈ ವಿಷಯದಲ್ಲಿ ಯಾಕೆ ಮೌನ ವಹಿಸಿದ್ದಾರೆ. ಈ ಸಂಬಂಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಕೇಳಿದರು.


ಇನ್ನೂ ನಾಲ್ಕು ಜನ ಶಾಸಕರು ಬಿಜೆಪಿಗೆ ಬರ್ತಾರೆ ಎಂಬ ಆನಂದ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿ.
ಈ ರೀತಿಯ ಊಹಾ ಪೋಹಗಳುನ್ನು ಬಿಜೆಪಿಯವರು ಹೇಳ್ತನೇ ಇರ್ತಾರೆ. ಬಿಜೆಪಿಗೆ ಯಾರೂ ಹೋಗ್ತಾರೋ ಗೊತ್ತಿಲ್ಲ.
ಯಾರಾರು ಬಿಜೆಪಿ ಪಕ್ಷದ ಮುಖಂಡರ ಬಳಿ ಮಾತನಾಡಿದ್ದಾರೋ ಗೊತ್ತಿಲ್ಲ ಇವೆಲ್ಲ ಕೇವಲ ವದಂತಿಗಳು ಮಾತ್ರ ಎಂದರು.