ಮೊದಲು ರಕ್ತದಾನ: ನಂತರ ಲಸಿಕೆ

ಮೈಸೂರು:ಏ:24: ಮಹಾಮಾರಿ ಕೋರೋನಾ ಸಂದರ್ಭದಲ್ಲಿ ರಾಜ್ಯದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ .ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಕೂರೂನಾ ನಿಯಂತ್ರಣಕ್ಕೆ ಯುವಕ ಯುವತಿಯರು ನೆರವಾಗಬೇಕೆಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮನವಿ ಮಾಡಿಕೊಂಡರು.
ಲಾಕ್ ಡೌನ್ ನಲ್ಲಿ ಸರ್ಕಾರವು ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿದಾಗ ದೇಶಾದ್ಯಂತ ರಕ್ತ ನಿಧಿಗಳು ರಕ್ತದ ಕೊರತೆಯನ್ನು ಎದುರಿಸುತ್ತಿದ್ದು, ಕುರೂನಾ ಲಸಿಕೆ ಪಡೆದವರಿಂದ ಕಡ್ಡಾಯವಾಗಿ 4 ವಾರಗಳವರೆಗೆ ರಕ್ತ ಸಂಗ್ರಹ ಮಾಡುವಂತಿಲ್ಲ ಎಂದು ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ ಸೂಚಿಸಿದ್ದಾರೆ.
ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟು ಸಂದರ್ಭಗಳಲ್ಲಿ ಇರುತ್ತದೆ, ಅಪಘಾತ, ಹೆರಿಗೆ, ಶಸ್ತ್ರ ಚಿಕಿತ್ಸೆ ವೇಳೆ ,ಕ್ಯಾನ್ಸರ್ ರೋಗಿಗಳಿಗೆ ,ಡಯಾಲಿಸಿಸ್ ರೋಗಿಗಳಿಗೆ ಸೇರಿದಂತೆ ಇನ್ನಿತರ ರೋಗಗಳಿಗೆ ರಕ್ತ ಅತ್ಯಗತ್ಯ .ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ .ಆರೋಗ್ಯವಂತ ನಾಗರಿಕರು ಕೂರೂನಾ ಲಸಿಕೆಯನ್ನು ಹಾಕಿಸಿ ಕೊಳ್ಳುವ ಮೊದಲೇ ರಕ್ತದಾನ ಮಾಡುವ ಚಿಂತನೆ ಸಾರ್ವಜನಿಕರು ಮಾಡಬೇಕು .
ಹಾಗಾಗಿ ದಯಮಾಡಿ ಆಸ್ಪತ್ರೆಗಳಲ್ಲಿ ರಕ್ತದ ಅಗತ್ಯ ಪೂರೈಸುವ ಸಲುವಾಗಿ ಆರೋಗ್ಯವಂತ ನಾಗರಿಕರು ಕೂರೂನಾ ಲಸಿಕೆಯನ್ನು ಹಾಕಿಸಿಕೊಳ್ಳುವ ಮೊದಲೇ ರಕ್ತದಾನ ಮಾಡುವ ಬಗ್ಗೆ ಚಿಂತನೆ ಮಾಡಬೇಕು ,ಲಸಿಕೆ ಹಾಕಿಸಿ ಕೊಲ್ಲುವಂತಹ ನಾಗರಿಕ ಸ್ಥಳದಲ್ಲಿ ಇದ್ದಂಥ ಅಧಿಕಾರಿಗಳು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.