ಮೊದಲು ನಾವೆಲ್ಲರು ಭಾರತಿಯರು : ಹುಸೇನಸಾಬ್ ಕಂದಗಲ

ಜೇವರ್ಗಿ:ಸೆ.30 : ಭಾರತದಲ್ಲಿ ಅನೇಕ ಧರ್ಮಗಳಿವೆ, ಅನೇಕ ಜಾತಿ, ಪಂಗಡಗಳಿವೇ ಆಧರು ಕೂಡ ನಾವು ಸಹೋಧರಂತೆ ಬದುಕುತ್ತಿದ್ದೆವೆ. ಎಲ್ಲಾ ಧರ್ಮದವರು ಒಂದೆ ಎಂಬತೆ ನಾವು ಮುಂದೆ ಕೂಡ ಬದುಕಬೇಕಾದರೆ ಮೋದಲು ನಾವೇಲ್ಲರು ಭಾರತಿಯರಾಗಿರಬೇಕು ಎಂದು ಕನ್ನಡ ಭಾಷಣಕಾರ ಜನಾಬ ಲಾಲ ಹುಸೇನಸಾಬ್ ಕಂದಗಲ ಅಭಿಮತಪಟ್ಟರು.

ಪಟ್ಟಣದ ಮೈಹಿಬೂಬ್ ಫಕ್ಷನ್ ಹಾಲ್ ನಲ್ಲಿ ಜಲ್ಸಾ ಆಮದೇ ಮುಸ್ತಫಾ ವ ಜುಲೂಸೆ ಎ ಮೊಹ್ಮದಿ ಕಾರ್ಯಕ್ರಮ ಸಂಜೆ 8 ಗಂಟೆಗೆ ನಡೆಯಿತು. ಪಟ್ಟಣದ ಪ್ರಮುಖ ಬಿದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮವನ್ನುದ್ದೆಶಿಸಿ ಹುಸೇನಸಾಬ್ ಕಂದಗ¯ ಮಾತನಾಡಿ ಪ್ರವಾದಿ ಮೊಹ್ಮದ ರವರು ಅರಬ್ಬರಿಗಿಂತ ನಮ್ಮಗೆ ಹೆಚ್ಚಾಗಿ ತಿಳಿದಿದ್ದಾರೆ. ವಸ್ತುಗಳಿಂದ ಮನಿಷ್ಯ ಶ್ರೇಷ್ಟನಾಗುವುದಿಲ್ಲ, ಮನುಷ್ಯನು ಕೂಡ ಪೂಜೆಗೆ ಅರ್ಹನಲ್ಲ ಎಂಬುವುದನ್ನ ತಿಳಿಸಿದವರು. ದೇವನು ಒಬ್ಬನೆ ಎಂಬುವುದನ್ನ ತಿಳಿದು ನಾವು ಅನುಸರಿಸಬೇಕು. ಆಧುನಿಕ ಜಗತ್ತಿನಲ್ಲು ಕೂಡ ಅಶ್ಪøಷ್ಯತೆ ಇನ್ನು ಜೀವಂತವಿದೆ. ಸರ್ವ ಧರ್ಮದವರು ನಾವೆಲ್ಲರು ಒಂದಾಗಿ ಬದುಕಬೇಕು. ಸರ್ವಜನಾಂಗದ ಶಾಂತಿಯ ತೋಟ ನಮ್ಮದು. ನಾವು ನಮ್ಮ ಉಸಿರುರವವರೆಗು ಕೂಡ ಭಾರತಿಯರಾಗಿ ಬದುಕಬೇಕು ಎಂದರು.

ನಂತರ ಶಾಸಕ ಡಾ. ಅಜಯಸಿಂಗ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಯಾವುದೆ ಧರ್ಮದ ಬೇಧ ಭಾವವಿಲ್ಲದೆ ನಾವೆಲ್ಲರು ಒಂದು ಎಂದು ಜೀವನ ನಡೆಸುತ್ತಿರುವ ಏಕೈಕ ಕ್ಷೇತ್ರವೇಂದರೆ ನಮ್ಮ ಜೇವರ್ಗಿ. 126 ಶಾಧಿ ಮಹಲ್ ಗಳ ಕಾಮಗಾರಿಗೆ ಸುಮಾರು 58 ಕೋಟಿ ಅನುಧಾನವನ್ನ ನಮ್ಮ ರಾಜ್ಯ ಸರಕಾರ ಬಿಡುಗಡೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ಶಾಧಿ ಮಹಲ್ ಪೂರ್ಣ ಗೋಲಿಸುತ್ತೆವೆ. ರಾಜ್ಯದಲ್ಲಿ ಮೈನಾರಿಟಿ ಸಲುವಾಗಿ 2 ಸಾವಿರ ಕೋಟಿ ಅನುಧಾನವನ್ನ ಮಿಸಲಿಡಲಾಗಿದೆ ಎಂದರು.

ಮೂಲಾನ ಮೊಹ್ಮದ ಜಾವೇದ ಅಖ್ತರ್ ಮಿಸ್ಬಾಹಿ, ಡಾ. ಸಿದ್ದಲಿಂಗ ಮಹಸ್ವಾಮಿ, ಆಯುಶ್ಮಾನ ವರಜೋತಿ ಬಂತೆಜೀ, ಮೌಲಾನ ಮೊಹ್ಮದ ಗುಲ್ಜಾರ ಅಲಂ ರಿಜವಿ, ಮೌಲಾನ ರಿಜವಾನುಲಖಾದ್ರಿಸಾಬ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮೋಸಿನಸಾಬ್ ಜಾಗಿರದಾರ, ಅಲ್ ಹಾಜ್ ತಾಲಿಬ ಹುಸೇನಸಾಬ್, ಧರ್ಮಣ್ಣ ದೊಡ್ಮನಿ, ಶಿವರಾಜ ಪಾಟೀಲ್ ರದ್ದೆವಾಡಗಿ, ನೀಲಕಂಠರಾವ ಮೂಲಗೆ, ಸಲಿಂಸಾಬ ಚಿಕೂಸೇಠ, ರುಕುಂ ಪಟೇಲ್, ಖಾಸಿಂಪಟೇಲ್ ಪೊಲೀಸ್ ಪಾಟೀಲ್, ಅಲ್ಲಾಬಕಷ ಬಾಗಬಾನ, ಸೈಯದ ಅಮೀರಸಾಬ ಜಮದಾರ, ಅಬ್ದುಲ ಮಾಜೀದ ಗಿರಣಿ, ರಮೇಶ ಬಾಬು ವಕೀಲ, ರಜಶೇಖರ ಸೀರಿ, ಮೈಹೇಬೂಬಪಟೇಲ್ ಕೊಬಾಳ, ರೇಹಮಾನ ಪಟೆಲ್, ಖಾಸಿಂಪಟೇಲ ಮಾಗಣಗೇರಾ, ಮಹೇಬೂಬಸಾಬ ಕೆಂಭಾವಿ, ಶರಣಬಸಪ್ಪ ಕಲ್ಲಾ, ಸಿದ್ದಣ್ಣ ಹಾಲಗಡ್ಲಾ, ಶಾಂತಪ್ಪ ಕೂಡಲಗಿ, ತುಕರಾಮ ಚೌವ್ಹಾಣ, ರೌಫ್ ಹವಲದಾರ, ಸೋಫಿಸಾಬ ಗಂವ್ಹಾರ, ಮೋಹಿಯುದ್ದಿನ ಇನಾಮದಾರ, ನೀಸಾರ ಇನಾಮದಾರ, ಮರೆಪ್ಪ ಸರಡಗಿ, ಇಮ್ರಾನ ಕೂಕನೂರ, ರಫಿಕ್ ಜಮದಾರ, ಸೇರಿದಂತೆ ಅನೇಕರಿದ್ದರು.