ಮೊದಲು-ಎರಡನೇಯ ಮಗುವಿನ ನಡುವೆ ಅಂತರ ವಿರಲಿ.


ಸಂಜೆವಾಣಿ ವಾರ್ತೆ
ಸಂಡೂರು: ಮೇ: 22:  ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರದಲ್ಲಿ ಮಕ್ಕಳ ತಾಯಂದಿರಿಗೆ ಕುಟುಂಬ ಕಲ್ಯಾಣ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಜನಸಂಖ್ಯೆಯಲ್ಲಿ  ಭಾರತ ಮೊದಲ ಸ್ಥಾನಕ್ಕೇರುವ ದಿನಗಳು ದೂರವಿಲ್ಲ, ಜನಸಂಖ್ಯೆ ನಿಯಂತ್ರಿಸಲು ಕುಟುಂಬ ಕಲ್ಯಾಣ ಯೋಜನೆಯೇ ಉತ್ತಮ ಮಾರ್ಗ, ಅಲ್ಲದೇ ಮಕ್ಕಳು ಆರೋಗ್ಯವಂತರಾಗಿರಲು  ಸಹ ಕುಟುಂಬ ಕಲ್ಯಾಣ ಯೋಜನೆ ಸಹಕಾರಿ ಯಾಗುವುದು, ಮೂರು ವರ್ಷಗಳ ಅಂತರ ಕಾಪಾಡಲು ತಾತ್ಕಾಲಿಕ ವಿಧಾನಗಳಾದ ಗರ್ಭಾಶಯದಲ್ಲಿ ಅಳವಡಿಸುವ ಕಾಪರ್-ಟಿ  ಐದು ವರ್ಷದ 375,  ಮತ್ತು  ಹತ್ತು ವರ್ಷದ 380 ಂ, ಪ್ರತಿ ದಿನ   ನುಂಗುವ ಮಾತ್ರೆ ಮಾಲಾ-ಎನ್, ಅಥವಾ ಮೊದಲ ಮೂರು ತಿಂಗಳು ವಾರಕ್ಕೆರಡು ಬಾರಿ, ಮೂರು ತಿಂಗಳ ನಂತರ ವಾರಕ್ಕೊಮ್ಮೆ ನುಂಗುವ  ಛಾಯಾ ಮಾತ್ರೆಗಳು, ಮೂರು ತಿಂಗಳಿಗೊಮ್ಮೆ ಚುಚ್ಚುಮದ್ದು ರೂಪದಲ್ಲಿ ಕೊಡುವ ಅಂತರ ಇನ್ಜೆಕ್ಷನ್ ಮತ್ತು ಲೈಂಗಿಕ ಕ್ರಿಯೆಯಲ್ಲಿ ತೊಡುಗುವಾಗ  ಪುರುಷ ಅಥವಾ ಮಹಿಳಾ ನಿರೋಧ್ ಗಳನ್ನು ಬಳಸಿ ಮಗುವಿನ ಮದ್ಯ ಅಂತರ ಕಾಪಾಡುವ ಬಗ್ಗೆ ಮಾಹಿತಿ ನೀಡಿದರು,  ಹೆಣ್ಣಾಗಲಿ ಗಂಡಾಗಲಿ ಎರಡು ಮಕ್ಕಳ ನಂತರ ಮಹಿಳೆಯರಿಗೆ ಲ್ಯಾಪರೊಸ್ಕೋಪಿಕ್ ಅಥವಾ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ, ಪುರುಷರಿಗೆ ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಿದರು,  ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಒಬ್ಬರು ಕಾಪರ್-ಟಿ ಮತ್ತೊಬ್ಬರು ಅಂತರ ಇಂಜೆಕ್ಷನ್ ಹಾಕಿಸಿಕೊಂಡು ಕುಟುಂಬ ಕಲ್ಯಾಣ ಯೋಜನೆ ಅನುಸರಿಸುತ್ತಿದ್ದ ಮಹಿಳೆಯರಿಗೆ ಚಪ್ಪಾಳೆ ತಟ್ಟಿ ಪ್ರಶಂಸೆ ವ್ಯಕ್ತ ಪಡಿಸಲಾಯಿತು,
ಈ ಸಂದರ್ಭದಲ್ಲಿ ಐ.ಸಿ.ಡಿ.ಎಸ್ ಮಹಿಳಾ ಮೇಲ್ವಿಚಾರಕಿಯರಾದ ಎಮ್.ಎಮ್ ಭಜಂತ್ರಿ,  ಗೀತಾ ಅರ್ಕಚಾರಿ, ಮತ್ತು ಮಕ್ಕಳ ತಾಯಂದಿರು ಉಪಸ್ಥಿತರಿದ್ದರು