ಮೊದಲಿದ್ದ ದರದಲ್ಲೇ ಸಸಿಗಳನ್ನು  ಕೊಡಲು ಅರಣ್ಯ ಇಲಾಖೆಗೆ ಕೂಡ್ಲಿಗಿ ರೈತರ ಮನವಿ.


ಕೂಡ್ಲಿಗಿ. ಮೇ.16 :- ಅರಣ್ಯ ಇಲಾಖೆಯಿಂದ ನೀಡುವ ಶ್ರೀಗಂಧ, ತೇಗ, ಹುಣಿಸೆ, ಕರಿಬೇವು, ಸಿಲ್ವರ್ ಓಕ್, ವಂಗೆ, ನುಗ್ಗೆ ಸಸಿಗಳನ್ನು ಮೊದಲಿದ್ದ ದರದಲ್ಲಿ ಕೊಡುವಂತೆ ಕೂಡ್ಲಿಗಿ ತಾಲೂಕಿನ ರೈತರು ಪತ್ರಿಕೆ ಮೂಲಕ ಮನವಿ ಮಾಡಿಕೊಂಡಿದ್ದು ಅರಣ್ಯ ಇಲಾಖೆಯ ಗಮನಕ್ಕೆ ತರಬಯಸಿದ್ದಾರೆ
ಕಳೆದ ವರ್ಷದಲ್ಲಿ ನೀಡುತ್ತಿದ್ದ ಈ ಗಾತ್ರದ ಸಸಿಗಳನ್ನು 5×2=1ರೂ , 6×9=1ರೂ ಹಾಗೂ 8×12 =3ರೂ ಗೆ ನೀಡುತ್ತಿದ್ದು ಈ ಬಾರಿ ಅದೇ ಅಳತೆಯ ಸಸಿಗಳನ್ನು 5ರೂ 7ರೂ ಹಾಗೂ 23.60ರೂ ಗೆ ನೀಡಲಾಗುತ್ತಿದೆ ಅಲ್ಲದೆ ಈ ಸಸಿಗಳನ್ನು ಮೂರುವರ್ಷದವರೆಗೂ ಬದುಕುಳಿಸಿದರೆ 125ರೂ ಗಿದಕ್ಕೊಂದರಂತೆ ಪ್ರೋತ್ಸಾಹ ಧನ ಅರಣ್ಯ ಇಲಾಖೆಯಿಂದ ನೀಡಲಾಗುತ್ತಿತ್ತು ಆದರೆ ಪ್ರೋತ್ಸಾಹ ಧನ ಅದೇ ಇದ್ದು ಸಸಿಗಳ ಬೆಲೆ ಹೆಚ್ಚಾಗಿದೆ ಇದರಿಂದಾಗಿ ರೈತರು ಸಸಿಗಳನ್ನು ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದು ಅರಣ್ಯ ಇಲಾಖೆಯ ಮೇಲಧಿಕಾರಿಗಳು ರೈತರ ಪರ ಗಮನಹರಿಸಿ ಮೊದಲಿದ್ದ ಹಿಂದಿನ ವರ್ಷದ ದರದಲ್ಲಿ ಸಸಿಗಳನ್ನು ಅರಣ್ಯ ಇಲಾಖೆ ರೈತರಿಗೆ ನೀಡುವಂತೆ ತಾಲೂಕಿನ ಗುಡೇಕೋಟೆ ನಾಗರಾಜ, ತಿಪ್ಪೇಸ್ವಾಮಿ, ರಾಜಣ್ಣ, ಸುರೇಶ, ಜರ್ಮಲಿ ಪಾಲಣ್ಣ, ಬೋರಯ್ಯ, ಕಾಟಯ್ಯ ಸೇರಿದಂತೆ ತಾಲೂಕಿನ ನೂರಾರು ರೈತರ ಆಗ್ರಹವಾಗಿದ್ದು ಅರಣ್ಯ ಇಲಾಖೆಯಿಂದ ಕೊಡಮಾಡುವ ಸಸಿಗಳ ದರವನ್ನು ಕಡಿಮೆ ಮಾಡಿ ಕಳೆದ ವರ್ಷದ ದರದಲ್ಲಿ ಸಸಿಗಳನ್ನು ರೈತರಿಗೆ ಕೊಡುವಂತೆ ಅರಣ್ಯ ಇಲಾಖೆಯ ಮೇಲಧಿಕಾರಿಗಳಲ್ಲಿ ತಾಲೂಕಿನ ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ.