
ಸಂಜೆವಾಣಿ ವಾರ್ತೆ
ಕಾರಟಗಿ: ಮೇ:05: ಬಸವರಾಜ್ ಧಡೇಸೂಗೂರು ಇವರನ್ನು ಮೊತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ಎಸ್ ವಿಜಯೇಂದ್ರ ಅವರ ತಿಳಿಸಿದರು,
ಗುರುವಾರದಂದು ನಗರದ ಪುರಸಭೆ ಮೈದಾನದಿಂದ ಎ.ಪಿ.ಎಂ.ಸಿ.ವರೆಗೆ ನಡೆದ ಬಿಜೆಪಿ ಪಕ್ಷದ ಪ್ರಚಾರದ ರೋಡ್ ಶೋ ಕಾರ್ಯಕ್ರಮದ ತೆರದ ವಾಹನದಲ್ಲಿ
ಕಾರ್ಯಕರ್ತರನ್ನುದ್ದೆಶೀಸಿ ಅವರು ಮಾತನಾಡಿದರು,
ರಾಜ್ಯದಲ್ಲಿ ಮೊತ್ತಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಕ್ಷೇತ್ರದ ಜನರು ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿ ಮೊತ್ತಮ್ಮೆ ಬಸವರಾಜ ಇವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ತಿಳಿಸಿದರು,
ಪುರಸಭೆಯಿಂದ ಎಪಿಎಂಸಿ ವರೆಗೆ ಸಾಗಬೇಕಿದ್ದ ರೋಡ್ ಶೋ ನವಲಿ ರಸ್ತೆಯ ಕನಕದಾಸ ವೃತ್ತದಲ್ಲಿ ಕೊನೆಗೊಂಡಿತು, ಜನರ ಕೊರೆತೆ ಎದ್ದು ಕಾಣತೊಡಗಿದ್ದರಿಂದ ಕಾರ್ಯಕ್ರಮವನ್ನು ಅಲ್ಲಿಗೆ ಮೋಟಕುಗೊಳಿಸಿ ಅಲ್ಲಿಂದ ವಿಜಯೇಂದ್ರ ಅವರು ತೆರಳಿದರು,
ಈ ಸಂದರ್ಭದಲ್ಲಿ ಮುಖಂಡರಾದ ವಿರೇಶ್ ಸಾಲೋಣಿ. ನಾಗರಾಜ್ ಬಿಲ್ಗರ್. ಚಂದ್ರಶೇಖರ ಮುಸಾಲಿ.ಮಂಜುನಾಥ ಮಸ್ಕಿ, ರಮೇಶ್ ನಾಯಕ ನಾಡಿಗರೆ, ಶರಣಪ್ಪ ಗದ್ದಿ, ಮಂಜುನಾಥ್ ನಾಯಕ ಸೇರಿದಂತೆ ವಿವಿಧ ಮೋರ್ಚಾದ ಪಧಾದಿಕಾರಿಗಳು ಕಾರ್ಯಕರ್ತರು ಇದ್ದರು,