ಮೊಡವೆ ನಿವಾರಣೆಗೆ ಮನೆಮದ್ದು

ಮೊಡವೆ ಮುಖದಲ್ಲಿ ಮಾತ್ರವಲ್ಲ, ಎದೆಯಲ್ಲಿ, ಬೆನ್ನಿನಲ್ಲಿ ಕಂಡು ಬರುವುದು. ಕೆಲವೊಮ್ಮೆ ಯಾವ ಕ್ರೀಮ್ ಮೊಡವೆ ಕಡಿಮೆ ಮಾಡಲು ಸಹಾಯ ಮಾಡುವುದಿಲ್ಲ. ಮೊಡವೆಯನ್ನು ಕಲೆ ಬೀಳದಂತೆ ನಿವಾರಿಸಲು ಇಲ್ಲಿ ನಾವು ಕೆಲ ಮನೆ ಮದ್ದು ಸಹಕಾರಿಯಾಗಲಿದೆ

ಮೊಡವೆ ಬಂದಾಗ ಟಚ್ ಮಾಡಬೇಡಿ ಮೊಡವೆ ಬಂದಾಗ ಪಾಲಿಸಬೇಕಾದ ಮೊದಲ ಟಿಪ್ಸ್ ಅಂದರೆ ಅದನ್ನು ಮುಟ್ಟದಿರುವುದು. ಆದರೆ ನಮ್ಮ ಕೈ ಮೊಡವೆಯನ್ನು ಆಗಾಗ ಮುಟ್ಟುತ್ತಿರುತ್ತದೆ. ಮೊಡವೆ ಮುಟ್ಟಿದರೆ ಅದರ ಬ್ಯಾಕ್ಟೀರಿಯಾ ಮುಖದ ಇತರ ಕಡೆಗೆ ಹರಡಿ ಮೊಡವೆ ಸಮಸ್ಯೆ ಹೆಚ್ಚಾಗುವುದು ಆದ್ದರಿಂದ ಮೊಡವೆ ಮುಟ್ಟಬೇಡಿ.

ದಿನದಲ್ಲಿ ಮುಖವನ್ನು 3-4 ಬಾರಿ ತೊಳೆಯಿರಿ. ಮುಖದಲ್ಲಿ ಎಣ್ಣೆಯಂಶ ಉಂಟಾದರೆ ತಕ್ಷಣ ಮುಖವನ್ನು ತೊಳೆಯಿರಿ. ಅದರಲ್ಲೂ ತಣ್ಣೀರಿನಿಂದ ಮುಖ ತೊಳೆಯುವುದು ಒಳ್ಳೆಯದು.

ಮೊಡವೆ ಚಿವುಟಿದರೆ ಮುಖದಲ್ಲಿ ಕಲೆ ಮಾತ್ರವಲ್ಲ ರಂಧ್ರಗಳು ಉಂಟಾಗುವುದು. ಆದ್ದರಿಂದ ಚಿವುಟಬೇಡಿ.

ಮುಖಕ್ಕೆ ಕೆಮಿಕಲ್ ಇರುವ ಸ್ಕ್ರಬ್ ಬಳಸುವ ಬದಲು ಓಟ್ಸ್ ಬಳಸಿ ಸ್ಕ್ರಬ್ ಮಾಡಿ. ಇದು ನಿರ್ಜೀವ ತ್ವಚೆಯನ್ನು ಹೋಗಲಾಡಿಸುತ್ತದೆ.

ದೇಹದ ಇತರ ಭಾಗದಲ್ಲಿ ಮೊಡವೆಯಾಗಿದ್ದರೆ ಟೀ ಟ್ರೀ ಆಯಿಲ್ ಹಚ್ಚಿ ಮಸಾಜ್ ಮಾಡಿ. ಈ ರೀತಿ ನಿಯಮಿತವಾಗಿ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುವುದು.

ನಿಂಬೆರಸ ಹಚ್ಚಿದರೆ ಮುಖದಲ್ಲಿ ಉರಿ ಕಂಡು ಬರುತ್ತದೆ. ಆದರೆ ಮೊಡವೆ ಒಣಗಲು ಮತ್ತು ಕಲೆ ಮಾಯವಾಗಿಸುವಲ್ಲಿ ಇದು ಸಹಾಯಕಾರಿ.