ಮೊಡವೆಗೆ ಮನೆ ಮದ್ದು

ಮೊಡವೆ ಬಂದರೆ ಅದು ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಡುತ್ತದೆ, ಯಾವ ಕ್ರೀಮ್ ಹಚ್ಚಿದರೂ ಕಡಿಮೆಯಾಗುವುದಿಲ್ಲ. ಮೊಡವೆ ಹೆಚ್ಚು ಬರುವುದನ್ನು ತಡೆಯಲು ಮೊದಲು ಮುಖ ಎಣ್ಣೆಯಾಗಲು ಬಿಡಬಾರದು. ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ. ಎಣ್ಣೆ ತ್ವಚೆಯವರೆಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಮೊಡವೆ ಬಂದರೆ ನಂತರ ಕಲೆಗಳು, ರಂಧ್ರಗಳು ಬೀಳವುದು. ಕೆಲವರಿಗೆ ಮೊಡವೆ ಮುಖದ ಅಂದವನ್ನು ಶಾಶ್ವತವಾಗಿ ಕೆಡಿಸಿ ಬಿಡುತ್ತದೆ. ಮೊಡವೆ ಬರುವಾಗಲೇ ಅದಕ್ಕೆ ಮದ್ದು ಮಾಡಿದರೆ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಬಹುದು.
ಟೀ ಟ್ರೀ ಎಣ್ಣೆ: ನೀವು ಬಳಸುವ ಕ್ಲೆನ್ಸರ್‌ಗೆ ಒಂದು ಡ್ರಾಪ್ ಟೀ ಟ್ರೀ ಎಣ್ಣೆ ಹಾಕಿ, ಇದು ವೈಟ್ ಹೆಡ್ಸ್ ಹಾಗೂ ಬ್ಲ್ಯಾಕ್ ಹೆಡ್ಸ್ ತಡೆಗಟ್ಟುವಲ್ಲಿ ಸಹಕಾರಿ.
ಗ್ರೀನ್ ಟೀ: ಗ್ರೀನ್ ಟೀಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ, ನೀರು ಆರಿದ ಮೇಲೆ ಆ ನೀರನ್ನು ಮುಖಕ್ಕೆ ಹಚ್ಚಿ ೧೦ ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು. ಈ ರೀತಿ ಮೊಡವೆ ಕಡಿಮೆಯಾಗುವವರೆಗೆ ಮಾಡಬೇಕು.
ಮೊಟ್ಟೆಯ ಬಿಳಿ: ಮೊಟ್ಟೆಯ ಬಿಳಿ ತ್ವಚೆ ಬಿಗಿಯಾಗಲು ಸಹಾಯ ಮಾಡುತ್ತದೆ, ಮುಖದ ತ್ವಚೆ ಬಿಗಿಯಾಗಿಯಾದರೆ ಮುಖದ ಆಕರ್ಷಣೆ ಹೆಚ್ಚುವುದು. ಇದರ ಬಿಳಿಯನ್ನು ಜೇನು ಜತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ೧೫ ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರಿತಿ ವಾರಕ್ಕೊಮ್ಮೆ ಮಾಡಿ.
ಆ?ಯಪಲ್ ಸಿಡರ್ ವಿನಿಗರ್: ಇದನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಟೋನರ್ ಆಗಿ ಬಳಸುವುದರಿಂದ ಮುಖದಲ್ಲಿ ಎಣ್ಣೆ ತ್ವಚೆ ಕಡಿಮೆಯಾಗಿ ಮೊಡವೆ ಸಮಸ್ಯೆ ಕಡಿಮೆಯಾಗುವುದು.