ಮೊಟ್ಟೆ ಮೆಂತೆ ಸೊಪ್ಪಿನ ಪಲಾವ್

ಬೇಕಾಗುವ ಸಾಮಾಗ್ರಿಗಳು :

ಎಣ್ಣೆ : ೪ ದೊಡ್ಡ ಚಮಚ
ಮೊಟ್ಟೆಗಳು : ೨
ಕಾಳು ಮೆಣಸಿನ ಪುಡಿ
ಕೆಂಪು ಮೆಣಸಿನ ಪುಡಿ
ಅರಶಿನ ಪುಡಿ
ದೊಡ್ಡ ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಟೊಮೇಟೊ
ಮೆಂತ್ಯ ಸೊಪ್ಪು
ಹಸಿ ಬಟಾಣಿ
ಕ್ಯಾರಟ್
ಹಸಿ ಮೆಣಸು
ಅನ್ನ (ಬೇಯಿಸಿದ್ದು) ಮೂರುವರೆ ಕಪ್
ಕೊತ್ತಂಬರಿ ಸೊಪ್ಪು
ಉಪ್ಪು

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಹಾಗು ಅದಕ್ಕೆ ಮೊಟ್ಟೆಯನ್ನು ಒಡೆದು ಹಾಕಿ.ಹಾಗೆಯೇ ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕದಡಿ.ಸರಿಯಾಗಿ ಹುರಿದು ಇದನ್ನು ಬದಿಗೆ ತೆಗೆದಿಟ್ಟುಕೊಳ್ಳಿ.

ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅಚ್ಚ ಖಾರದ ಪುಡಿ, ಉಪ್ಪು, ಅರಶಿನ ಪುಡಿ ಹಾಕಿ ಚೆನ್ನಾಗಿ ಕಲಸಿ.ಇದಕ್ಕೆ ಬೇಯಿಸಿದ ಹಾಗೂ ಹುರಿದ ಮೊಟ್ಟೆಯನ್ನು ಹಾಕಿ.

ಚೆನ್ನಾಗಿ ಕಲಸಿ.ಕೆಲವು ನಿಮಿಷಗಳ ಕಾಲ ಹುರಿಯಿರಿ ಹಾಗೂ ಮೊಟ್ಟೆಗಳನ್ನು ಮಗುಚಿ ಎಲ್ಲ ಕಡೆಯೂ ಚೆನ್ನಾಗಿ ಹುರಿಯಿರಿ.

ಹುರಿದ ಮೊಟ್ಟೆಗಳನ್ನು ಬದಿಗೆ ತೆಗೆದಿಡಿ.ನಂತರ ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಇದಕ್ಕೆ ಶುಂಠಿ : ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ, ಮೆಂತ್ಯ ಸೊಪ್ಪು ಹಾಗೂ ಉಪ್ಪನ್ನು ಹಾಕಿ ೨ ರಿಂದ ೩ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.

ನಂತರ ಹಸಿ ಬಟಾಣಿ, ಬೀನ್ಸ್, ಕ್ಯಾರಟ್, ಹಸಿ ಮೆಣಸನ್ನು ಹಾಕಿ ಕಲಸಿ.

ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ ೩ ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ.

ಬೇಯಿಸಿದ ಅನ್ನ ಹಾಕಿ ನಿಧಾನವಾಗಿ ಕಲಸಿ.ಉಪ್ಪಿನ ಹದ ನೋಡಿಕೊಳ್ಳಿ.

ಇದಕ್ಕೆ ಹರಡಿ ಬೇಯಿಸಿದ ಮೊಟ್ಟೆ, ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿದರೆ ತವಾ ಮೆಂತ್ಯ ಮೊಟ್ಟೆ ಪುಲಾವ್ ರೆಡಿ. ಮೇಲೆ ಹುರಿದ ಮೊಟ್ಟೆಗಳನ್ನಿಟ್ಟು ಬಡಿಸಿ