ಮೊಟ್ಟೆ, ಬಾಳೇಹಣ್ಣು ವಿತರಣೆ : ಅಪೌಷ್ಠಿಕ ನಿವಾರಣೆಗೆ ಸಹಕಾರಿ-ಸುರೇಶ

ಸಿರವಾರ.ಡಿ.೧- ರಾಜ್ಯದ ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರವು ೧ ರಿಂದ ೮ನೇ ತರಗತಿಯ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆ ಹಣ್ಣುಗಳನ್ನು ವಿತರಣೆ ಮಾಡುತ್ತಿದ್ದೂ, ಊಟದ ಜೊತೆಗೆ ವಿದ್ಯಾರ್ಥಿಗಳು ಸೇವನೆ ಮಾಡುವ ಮೂಲಕ ಅಪೌಷ್ಠಿಕತೆಯನ್ನು ಹೋಗಲಾಡಿಸಿ, ಇದರಲ್ಲಿ ಬೇಧ ಭಾವ ಇಲ್ಲ, ನಿಸಂಕೋಚವಾಗಿ ಕೇಳಿ ಪಡೆದುಕೊಳ್ಳಬೇಕು ಎಂದು ಬಾಲಕರ ಪ್ರೌಢಶಾಲೆಯ ಮು.ಗು ಸುರೇಶ ಡಿ. ಹೇಳಿದರು.
ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ೧ ರಿಂದ ೮ ನೇ ತರಗತಿಯ ವಿದ್ಯಾರ್ಥಿ/ನೀಯರಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ, ಮೊಟ್ಟೆ ಸೇವನೆ ಮಾಡದಿದರೆ ಬಾಳೆ ಹಣ್ಣು ವಿತರಣೆಗೆ ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮೇಶ ಜಾಲಾಪೂರ, ಉಪಾದ್ಯಕ್ಷೆ ಉಮಾದೇವಿ ರಿಂದ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಮಕ್ಕಳ ಬೆಳವಣಿಗೆ ದೃಷ್ಠಿಯಿಂದ ಸರ್ಕಾರ ಮೊಟ್ಟೆ, ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ನಿಸಂಕೋಚ ಪಡದೆ ಕೇಳಿ ಪಡೆದು ಸೇವನೆ ಮಾಡಬೇಕು. ಅಹಾರ ಸೇವನೆ ಪೂರ್ವದಲ್ಲಿ ಕೈಕಾಲು ಸ್ವಚ್ಚವಾಗಿ ತೊಳೆದುಕೊಂಢು ಸೇವನೆ ಮಾಡಬೇಕು. ಆರೋಗ್ಯ ಕಾಪಾಡಿಕೊಳಿ, ಉತ್ತಮ ಆರೋಗ್ಯವಿದ್ದರೆ ಪಾಠ ಮನನವಾಗುತ್ತದೆ. ಅಧಿಕ ಅಂಕಗಳಿಸಬಹುದು ಎಂದರು. ಪತ್ರಕರ್ತರಾದ ಹನುಮೇಶ ಛಲವಾದಿ, ಶಿಕ್ಷಕರಾದ ಕೇಶಪ್ಪ,ರಾಮಣ್ಣ, ರಘುನಂದನ,ಮಂಜುನಾಥ, ಜಗದೀಶ,ಗಿರಿಜಾ,ದಾಕ್ಷಾಯಿಣಿ, ಲಕ್ಷ್ಮೀ,ಸುಶ್ಮೀತಾ, ಅತಿಥಿ ಶಿಕ್ಷಕರಾದ ರಮೇಶ,ಸುನಂದಾ,ವಿಜಯಲಕ್ಷ್ಮೀ, ಪವಿತ್ರ, ಮೌನೇಶ, ಹನುಮಂತ ಸೇರಿದಂತೆ ಇನ್ನಿತರರು ಇದ್ದರು.