ಮೊಟ್ಟೆ ಕರಿ

ಬೇಕಾಗುವ ಸಾಮಾಗ್ರಿಗಳು:
ಬೇಯಿಸಿದ ಮೊಟ್ಟೆ 5
ಒಂದು ಹಸಿ ಮೊಟ್ಟೆ
ಆಲೂಗೆಡ್ಡೆ 2
ಎಣ್ಣೆ
ಸಾಸಿವೆ
ಕರಿಬೇವು
ಮಸಾಲೆಗೆ:
ತುರಿದ ತೆಂಗಿನ ಕಾಯಿ 1 ಕಪ್
ಕತ್ತರಿಸಿದ ಈರುಳ್ಳಿ
ಟೊಮೆಟೊ 1
ಬೆಳ್ಳುಳ್ಳಿ 6-7 ಎಸಳು
ಶುಂಠಿ
ಅರ್ಧ ಚಮಚ ಅರಿಶಿಣ ಪುಡಿ
ಕೆಂಪು ಮೆಣಸಿನ ಪುಡಿ ಒಂದೂವರೆ ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ಜೀರಿಗೆ ಒಂದು ಚಮಚ
ಕರಿಮೆಣಸು 5-6
ಚಕ್ಕೆ, ಲವಂಗ
ಗಸೆಗಸೆ ಒಂದು ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಜೀರಿಗೆ, ಗಸಗಸೆ, ಕಾಳು ಮೆಣಸು, ಚಕ್ಕೆ ಮತ್ತು ಲವಂಗವನ್ನು ಎಣ್ಣೆ ಹಾಕದೆಯೇ ಬಾಣಲೆಯಲ್ಲಿ ಹುರಿದುಕೊಳ್ಳಬೇಕು. ನಂತರ ಹುರಿದ ಪದಾರ್ಥಗಳ ಜೊತೆ ತೆಂಗಿನ ತುರಿ ಸೇರಿಸಿ, ಅದಕ್ಕೆ ಕೊತ್ತಂಬರಿ ಪುಡಿ, ಅರಿಶಿಣಪುಡಿ, ಮೆಣಸಿನ ಪುಡಿ, ಶುಂಠಿ, ಬೆಳ್ಳುಳ್ಳಿ ಹಾಕಿ ಗಟ್ಟಿಯಾಗಿ, ನುಣ್ಣನೆ ರುಬ್ಬಿಕೊಳ್ಳಬೇಕು. ಈಗ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಕರಿಬೇವು ಹಾಕಬೇಕು. ನಂತರ ರುಬ್ಬಿದ ಮಸಾಲೆ ಮತ್ತು ರುಚಿಗೆ ಉಪ್ಪು ಹಾಕಿ ಮಿಶ್ರ ಮಾಡಿ, ಸ್ವಲ್ಪ ನೀರು ಮತ್ತು ಕತ್ತರಿಸಿದ ಆಲೂಗೆಡ್ಡೆ ಹಾಕಿ ಆಲೂಗೆಡ್ಡೆ ಬೇಯುವವರೆಗೆ ಬೇಯಿಸಬೇಕು. ನಂತರ ಒಂದು ಹಸಿ ಮೊಟ್ಟೆಯನ್ನು ಹಾಕಿ ಸೌಟ್ ನಿಂದ ಚೆನ್ನಾಗಿ ಕಲೆಸಬೇಕು. ನಂತರ ಬೇಯಿಸಿದ ಮೊಟ್ಟೆಯನ್ನು 2 ಸಮಭಾಗಗಳಾಗಿ ಕತ್ತರಿಸಿ ಹಾಕಬೇಕು. ನಂತರ 2-3 ನಿಮಿಷ ಕುದಿಸಿ, ಅದಕ್ಕೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿದರೆ ರುಚಿಕರವಾದ ಮೊಟ್ಟೆ ಸಾರು ರೆಡಿ