ಮೊಟ್ಟೆಯ ಗುಟ್ಟು

ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವಾ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.
ಮೊಟ್ಟೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿಗಿಂಡ್ ಅನ್‌ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವೇ ಹೆಚ್ಚು. ಅತಿ ಹೆಚ್ಚಾದ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೃದಯಾಘಾತ ಅಥವ ರಕ್ತದ ಒತ್ತಡಕ್ಕೆ ಒಂದು ಕಾರಣ. ಆದರೆ ಹೃದಯಾಘಾತಕ್ಕೆ ಇದಲ್ಲದೆ ನೂರಾರು ಕಾರಣಗಳಿವೆ. ಕ್ಯಾನ್ಸರ್ ಸಂಶೋಧನೆ, ಸಂಗ್ರಹಿಸಿದ ವೀರ್ಯಾಣುಗಳನ್ನು ಶೇಖರಿಸಲು, ಕಾಂತಿವರ್ಧಕಗಳ ತಯಾರಿಕೆ, ಔಷಧಗಳ ತಯಾರಿಕೆ, ಬೇಕರಿ ತಿನಿಸುಗಳ ತಯಾರಿಕೆ, ಕೆಲವು ಪ್ರಾಣಿ ಆಹಾರಗಳ ತಯಾರಿಕೆ, ಚರ್ಮ ಹದ ಮಾಡಲು ಹೀಗೆ ಹತ್ತು ಹಲವಾರು ಬೇರೆ ಬೇರೆ ಉದ್ಯಮಗಳಲ್ಲಿ ಮೊಟ್ಟೆಯನ್ನು ಉಪಯೋಗಿಸಲಾಗುತ್ತಿದೆ.
ಬೆಳಿಗ್ಗೆ ಬ್ರೇಕ್‌ಫಾಸ್ಟ್ ಗೆ ಮೊಟ್ಟೆ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಮೊಟ್ಟೆ ಸೇವನೆಯಿಂದ ದಿನವಿಡೀ ಹಸಿವು ಕಡಿಮೆಯಾಗುವುದು.
ಇದರಿಂದ ಮಧ್ಯದಲ್ಲಿ ಬಿಸ್ಕಿಟ್, ಚಿಪ್ಸ್ ಇತರ ಜಂಕ್ ಫೂಡ್‌ಗಳನ್ನು ತಿನ್ನುವುದು ತಪ್ಪಿಸಬಹುದು. ಇದರಿಂದ ಇತರೇ ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು. ಹೆಚ್ಚಿನ ಪ್ರೋಟೀನ್ ಇರುವ ಅಂಶ ಇದರಲ್ಲಿ ಇರುವುದರಿಂದ ಆಗಾಗ ಹಸಿವು ಆಗುವುದಿಲ್ಲ. ಇದರಲ್ಲಿರುವ ಕಾರ್ಬೊಹೈಡ್ರೇಟ್ ಕೊಬ್ಬಿನ ಅಂಶವನ್ನು ಹೆಚ್ಚಾಗಿ ಸೇವಿಸಿದರೆ ಉತ್ತಮ. ದಿನಕ್ಕೆ ೪ ಮೊಟ್ಟೆ ಸೇವಿಸಬಹುದು. ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಾಗಿ ಸೇವಿಸಬಹುದು.
ಮೊಟ್ಟೆಯ ಹಳದಿ ಬಿಸಾಡಬೇಡಿ
ಹೆಚ್ಚಿನವರು ಮೊಟ್ಟೆಯ ಬಿಳಿ ಮಾತ್ರ ತಿಂದು ಅದರ ಹಳದಿಯನ್ನು ಬಿಸಾಡುತ್ತಾರೆ. ಈ ರೀತಿ ಮೊಟ್ಟೆಯ ಹಳದಿ ತಿನ್ನದಿದ್ದರೆ ಅದರಲ್ಲಿರುವ ಪೋಷಕಾಂಶಗಳು ಸುಮ್ಮನೆ ವ್ಯರ್ಥ ಮಾಡಬೇಡಿ . ಹಳದಿಯಲ್ಲಿರುವ ಕೊಬ್ಬಿನಂಶ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು. ವಾರದಲ್ಲಿ ೨ ಬಾರಿ ಇದರ ಹಳದಿ ತಿಂದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರಕಿದಂತೆ ಆಗುತ್ತದೆ.
ಹಳದಿಯಲ್ಲಿ ಉತ್ತಮ ಕೊಲೆಸ್ಟ್ರಾಲ್ ಮತ್ತು ಕ್ಯಾಲೋರಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.