ಮೊಟೇಷನ್,ಕಥಾ ನೀಡುವಲ್ಲಿ ನಿರ್ಲಕ್ಷ:ಡಿ.ವಿರೇಶ್ ಖಂಡನೆ

ರಾಯಚೂರು, ಜೂ.೫- ನಗರಸಭೆಯಲ್ಲಿ ಕಳೆದ ೬ ತಿಂಗಳಿನಿಂದ ಮೊಟೇಷನ್ ಹಾಗು ಕಥಾ ನೀಡುವಲ್ಲಿ ನಿರ್ಲಕ್ಷ, ವಿಳಂಬ ನೀತಿ ಅನುಸರಿಸುತ್ತಿದೆ ಎಂದು
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಡಿ.ವಿರೇಶ್ ಯಾದವ ಆರೋಪಿಸಿದರು.
ಅಸ್ತಿ ತೆರಿಗೆ ಮನೆಯ ಟ್ಯಾಕ್ಸ್ ಆನ್ ಲೈನ್ ಆಗಿರುವದರಿಂದ ೧ ವರ್ಷ ವಾದರೂ ಆನ್ ಲೈನ್ ಸರಿಪಡಿಸಲು ಆಗುತ್ತಿಲ್ಲ. ಇಲ್ಲಿಯವರೆಗೆ ಸುಮಾರು ೫೦೦೦ ಸಾವಿರ ಫೈಲ್ ಗಳು ಪೆಂಡಿಂಗ್ ಇಡಲಾಗಿದೆ. ಇದು ಎಂಥ ಆಡಳಿತ ಎಂದು ಅರ್ಥವಾಗುತಿಲ್ಲ. ನಂತರ ನಿರ್ಮಾಣ ಫೈಲ್ ಪರ್ಮಿಷನ್ ಇಲ್ಲಾ ಹೀಗಾಗಿ ಜನ ಸಾಮಾನ್ಯರು ನಗರ
ಸಭೆ ಆಡಳಿತ ನೋಡಿ ರೋಷಿ ಹೋಗಿದ್ದಾರೆ. ಮತ್ತು ಮಾವಿನ ಕೆರೆ ಒತ್ತುವರಿ ಆಗಿದೆ ಅದನ್ನು ತೆರವುಗೊಳಿಸದೆ ಈಗ ಅಭಿವೃದ್ಧಿ ಮಾಡಲು ಹೊರಟಿದ್ದಾರೆ.ಬಜೆಟ್ ನಲ್ಲಿ ೨೭ ಲಕ್ಷ ಉಳಿತಾಯ ತೋರಿಸದ್ದಾರೆ. ಉಳಿದ ಹಣ ಗಿಡ ನಡಲಿಕ್ಕೆ ಯಾವುದು ಲೆಕ್ಕಾ ತೋರಿಸಿ ಜನರನ್ನು ದಿಕ್ಕು ತಿಪ್ಪಿಸುವ ಕೆಲಸ ಮಾಡುತಿದ್ದರೆ ಎಂದು ಆರೋಪಿಸಿದರು. ಒಟ್ಟಾರೆ ನಗರಸಭೆ ಇದಿಯೋ ಇಲ್ಲವೂ ಅಂತ ಪರಸ್ಥಿತಿ ಇದೆ. ನಗರ ಸಭೆಯ ಅಂಗಡಿ ಗಳು ಬಾಡಿಗೆ ಕರ ವಸೂಲಿ ಇದರ ಲೆಕ್ಕಾ ಪತ್ರ ಯಾವುದು ಸರಿ ಇಲ್ಲ. ಜಿಲ್ಲಾಧಿಕಾರಿಗಳು ಇದನ್ನು ಸರಿಯಾಗಿ ಗಮನಿಸಬೇಕಾದ ಪರಸ್ಥಿತಿ ಇದೆ. ಕೂಡಲೇ ನಗರಸಭೆ ಕೆಲಸ ಕಾರ್ಯ ಹಾಗು ಒತ್ತುವರಿ ಜವಾಬ್ದಾರಿ ತೆಗುದುಕೊಂಡೋ ಕಾರ್ಯ ನಿರ್ವಹಣೆ ಮಾಡಬೇಕು. ಇದೆ ರೀತಿಯ ದೋರಣೆ ಮುಂದುವರಿದರೆ ಸಂಘಟನೆ ವತಿಯಿಂದ
ಸಾರ್ವಜನಿಕರೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.