ಮೊಗಲಾಯ್ ಚಿಕನ್

ಬೇಕಾಗುವ ಸಾಮಗ್ರಿಗಳು

*ಚಿಕನ್ ಪೀಸ್ – ೧/೨ ಕೆ.ಜಿ
*ಈರುಳ್ಳಿ ಪೇಸ್ಟ್ – ೧ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಒಣಕೊಬ್ಬರಿ ತುರಿ – ಒಂದೂವರೆ ಚಮಚ
*ಮೊಟ್ಟೆ – ೧
*ಕಸೂರಿ ಮೇಥಿ – ೧ ಚಮಚ
*ಸಪ್ಪೆ ಖೋವ – ೧.೫ ಚಮಚ
*ಫ್ರೆಶ್ ಕ್ರೀಮ್ – ೨ ಚಮಚ
*ಬೆಣ್ಣೆ – ೧ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೧೦೦ ಮಿ.ಲೀ

ಮಾಡುವ ವಿಧಾನ :

ಪ್ಯಾನ್‌ನಲ್ಲಿ ಬೆಣ್ಣೆ, ಚಿಕನ್ ಹಾಕಿ ಹುರಿದುಕೊಳ್ಳಿ. ಇದಕ್ಕೆ ಈರುಳ್ಳಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅಚ್ಚಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿನ್ನಾಗಿ ಫ್ರೈ ಮಾಡಿ. ಮತ್ತೆ ಅಗತ್ಯಕ್ಕೆ ತಕ್ಕಂತೆ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಹದವಾಗಿ ಬೇಯಿಸಿ. ನಂತರ ಒಣಕೊಬ್ಬರಿ, ಬೀಟ್ ಮಾಡಿದ ಮೊಟ್ಟೆ, ಕಸೂರಿ ಮೇಥಿ ಹಾಕಿ ಫ್ರೈ ಮಾಡಿ ಕೊನೆಯಲ್ಲಿ ಸಪ್ಪೆ ಖೋವಾ ಹಾಕಿ ಚೆನ್ನಾಗಿ ಫ್ರೈ ಮಾಡಿ, ಇದರ ಮೇಲೆ ಫ್ರೆಶ್ ಕ್ರೀಮ್ ಹಾಕಿದರೆ ಮೊಗಲಾಯ್ ಚಿಕನ್ ರೆಡಿ.