ಮೈ ಸೇವಾ ತಂಡ:ಉಚಿತ ಆಂಬುಲೆನ್ಸ್-ಸಂಸದ ಉದ್ಘಾಟನೆ

ರಾಯಚೂರು. ಮೇ.೩೦-ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೆ ತೆರಲಳು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ಬಿ.ವೈ.ವಿಜೇಯೇಂದ್ರ ರವರ ಮೈ ಸೇವಾ ತಂಡದಿಂದ ನಗರದಲ್ಲಿ ಇಂದು ಆರೋಗ್ಯ ಆಂಬುಲೆನ್ಸ್ ಸೇವೆಯನ್ನು ಸಂಸದ ರಾಜಾ ಅಮರೇಶ್ವರ ನಾಯಕ್ ಅವರು ಉದ್ಘಾಟಿಸಿದರು.
ಅವರಿಂದು ನಗರದ ನಿಜಲಿಂಗಪ್ಪ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿನ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಸಾಮಾನ್ಯರು ಸರ್ಕಾರಕ್ಕೆ ವಿಶೇಷ ಸೇವೆಯನ್ನು ಸಲ್ಲಿಸುತ್ತಿದ್ದಾರೆ ನಮ್ಮ ಸರ್ಕಾರ ಬಂದ ನಂತರ ಸಾಕಷ್ಟು ಮಹತ್ವದ ಕಾರ್ಯವನ್ನು ಮಾಡಿದ್ದು ಉದಾಹರಣೆಗೆ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಪೂಜೆ ಸೇರಿದಂತೆ ಇನ್ನಿತರ ಮಹತ್ವದ ಕಾರ್ಯವನ್ನು ನಡೆಸಿದ್ದು.
ಈ ವರ್ಷ ಹೆಚ್ಚಿನ ಅಭಿವೃದ್ದಿ ಕಡೆ ಗಮನ ಕೊಡಬೇಕಿತ್ತು ಆದರೆ ವಿಶ್ವದಾದ್ಯಂತ ಕೊರೋನಾ ರೋಗವು ವ್ಯಾಪಕವಾಗಿ ಹರಡಿದ್ದು ಎಲ್ಲಾರ ಶ್ರಮ ಈ ಕೋವಿಡ್ ಗೆ ಮುಡಿಪಾಗಿಟ್ಟಿದ್ದಾರೆ.
ಜನಸಾಂದ್ರತೆ ಹೆಚ್ಚಿರುವ ನಮ್ಮ ದೇಶದಲ್ಲಿ ಕೊರೊನ ತಡೆಯಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದರೆ ಜೊತೆಗೆ ಕೋವಿಡ್ ಲಸಿಕೆಯನ್ನು ಜನರಿಗೆ ನೀಡುತ್ತಿದ್ದಾರೆ.
ಮುಂದಿನ ದಿನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡುವ ಕೆಲಸ ಮಾಡುತ್ತಿದ್ದಾರೆ.
ಅದರಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜೇಂದರ ಅವರ ಮೈ ಸೇವಾ ತಂಡದಿಂದ ಜಿಲ್ಲೆಗೆ ಅಬ್ಯುಲೆನ್ಸ್ ನೀಡಿದ್ದಾರೆ ಅದರಂತೆ ಪ್ರಧಾನ ಮಂತ್ರಿಯವರ ಅನುದಾನದಲ್ಲಿ ಜಿಲ್ಲೆಗೆ ಆಕ್ಸಿಜನ್ ಹಾಗೂ ವ್ಯಂಟಿಲೇಟರ್ ಕಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಮಾನಂದ ಯಾದವ್,ರವೀಂದ್ರ ಜಲ್ದಾರ್,ಕದಗೋಲ್ ಆಂಜನೇಯ, ಶ್ರೀನಿವಾಸ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.