ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ

ರಾಯಚೂರು.ನ.11- ಮೈಸೂರು ಹುಲಿ, ಸ್ವತಂತ್ರ ಸೇನಾನಿ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತ್ಯೋತ್ಸವ ಅಂಗವಾಗಿ ನಿನ್ನೆ ನಗರದ ಅರಬ್ ಮೊಹಲ್ಲಾದ ಟಿಪ್ಪು ಸುಲ್ತಾನ್ ವೃತ್ತದ ಬಳಿಯಿರುವ ಟಿಪ್ಪು ಸುಲ್ತಾನ್ ಅವರ ನಾಮಫಲಕ್ಕೆ ಮಾಲಾರ್ಪಣೆ ಮಾಡಿ, ಸರಳವಾಗಿ ಜಯಂತಿ ಆಚರಿಸಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಅತ್ಯಂತ ಸರಳವಾಗಿ ಜಯಂತಿ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ಅವರ ಶೌರ್ಯದ ಗುಣಗಾನ ಮಾಡಲಾಯಿತು. ಬ್ರಿಟಿಷರ ವಿರುದ್ಧ ಅವರ ಹೋರಾಟ ಮತ್ತು ಮೈಸೂರು ಸಂಸ್ಥಾನದ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಸ್ಮರಿಸಲಾಯಿತು. ಶಿಕ್ಷಣ ಪ್ರೇಮಿಗಳಾದ ನ್ಯೂ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮುಜಿಬುದ್ದೀನ್, ಫೆಡರಲ್ ಶಿಕ್ಷಣ ಸಂಸ್ಥೆಯ ಮಹ್ಮದ್ ಅಬ್ದುಲ್ ಹೈ ಫಿರೋಜ್, ನಗರಸಭೆ ಸದಸ್ಯರಾದ ಜೆ.ಸಾಜೀದ್ ಸಮೀರ್, ರಜಾಕ್ ಉಸ್ತಾದ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.